ಸಂಸತ್ತಿನ‌ 75 ವರ್ಷದ ಪಯಣ : ವಿಶೇಷ ಅದಿವೇಶನದಲ್ಲಿ ಚರ್ಚೆ

ನವದೆಹಲಿ,ಸೆ.14-  ಸೋಮವಾರದಿಂದ ಆರಂಭವಾಗಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಸಂಸತ್ತಿನ‌ 75 ವರ್ಷಗಳ  ಪಯಣ ಕುರಿತು ಮೊದಲ‌ ದಿನ ಉಭಯ ಸದನಗಳನ್ನು ಚರ್ಚೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

1946ರ ಡಿಸೆಂಬರ್ 9,ರಂದು ಮೊದಲ ಬಾರಿಗೆ ಸಭೆ ಸೇರಿದ್ದ ಸಂವಿಧಾನ ಸಭೆಯಿಂದ ಪ್ರಾರಂಭಿಸಿ, ಸಂಸತ್ತಿನ 75 ವರ್ಷಗಳ ಪ್ರಯಾಣದ ಕುರಿತು ಕೇಂದ್ರ ಸರ್ಕಾರ ವಿಶೇಷ ಚರ್ಚೆಯನ್ನು ಪಟ್ಟಿ ಮಾಡಿದ್ದು ಸಂಸತ್ತಿನ, ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದೆ.

ಇದೇ   18 ರಿಂದ 22ರ ವರೆಗೆ 5 ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ.

ಇದರ ಜೊತೆಗೆ ಮುಖ್ಯ ಚುನಾವಣಾ ಆಯುಕ್ತರ  ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಮಸೂದೆ ಸೇರಿದಂತೆ ನಾಲ್ಕು ಮಸೂದೆ ಮಂಡನೆಯಾಗಲಿವೆ.

ಇದರ ಜೊತೆಗೆ  ವಕೀಲರ (ತಿದ್ದುಪಡಿ) ಮಸೂದೆ, 2023 ವಕೀಲರ ಕಾಯಿದೆ , 1961 ಅನ್ನು ತಿದ್ದುಪಡಿ ಮಾಡಲು ಮುಂದಾಗಿದೆ, ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ, 2023 ಪತ್ರಿಕಾ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ, 1867 ಅನ್ನು ರದ್ದುಗೊಳಿಸಲು ಸಹ ಉದ್ದೇಶಿಸಲಾಗಿದೆ ಎನ್ನಲಾಗಿದೆ

ಇದರ ಜೊತೆಗೆ, ‘ಪೋಸ್ಟ್ ಆಫೀಸ್ ಬಿಲ್, 2023’ ಅನ್ನು ಲೋಕಸಭೆಯ ವ್ಯವಹಾರದಲ್ಲಿ ಪಟ್ಟಿಯಲ್ಲಿ ಸೇರಿಸಲಾಗಿದೆ.ಇದು ಭಾರತೀಯ ಅಂಚೆ ಕಚೇರಿ ಕಾಯಿದೆ, 1898 ಅನ್ನು ರದ್ದುಗೊಳಿಸುತ್ತದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕಳೆದ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಮಂಡಿಸಿದ್ದರು.

ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆ ವಿರೋಧ ಪಕ್ಷಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆಗೆ ಕಾರಣವಾಗಿದೆ.  ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಈ ಮೊದಲು ಈ ಶಾಸನವು ಚುನಾವಣಾ ಆಯೋಗವನ್ನು “ಪ್ರಧಾನಿ ಕೈಯಲ್ಲಿ ಕೈಗೊಂಬೆ” ಮಾಡುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.