ಸಂಸತ್ತಿನ ಚಳಿಗಾಲದ ಅಧಿವೇಶನ ರದ್ದಾಗುವ ಸಾಧ್ಯತೆ

ನವದೆಹಲಿ ನ.೧೭- ಕೋವಿಡ್ ೧೯ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವುದು ಅನುಮಾನವಾಗಿದೆ.

ಸಾಮಾನ್ಯವಾಗಿ ನವಂಬರ್ ಮೂರನೇ ವಾರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು. ಆದರೆ ಕೇಂದ್ರ ಸರ್ಕಾರ ಇದುವರೆಗೂ ಅಧಿವೇಶನ ನಡೆಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಂತೆ ಕಾಣುತ್ತಿಲ್ಲ.

ಸಂಸತ್ತಿನ ಅಧಿವೇಶನ ನಡೆಯುವುದಾದರೆ ಕನಿಷ್ಠ ಎರಡು ವಾರಗಳ ಮುಂಚೆ ನೋಟಿಸ್ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯು ಇನ್ನೂ ಶುರುವಾಗಿಲ್ಲ.

ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ.

ಮುಂದಿನ ವರ್ಷದ ಜನವರಿ ಅಂತ್ಯಭಾಗದಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು ಎಲ್ಲಾ ಕಲಾಪಗಳನ್ನು ಅದೇ ಸಮಯದಲ್ಲಿ ನಡೆಸಲು ಉದ್ದೇಶಿಸಿದಂತೆ ಕಾಣುತ್ತಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ರದ್ದುಪಡಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡರೆ ಇದು ಸಹ ಅಪರೂಪದ ಬೆಳವಣಿಗೆ ಆಗಲಿದೆ. ೧೯೭೫,೧೯೭೯ ಮತ್ತು ೧೯೮೪ ರಲ್ಲಿ ಸಂಸತ್ ಅಧಿವೇಶನ ನಡೆದಿರಲಿಲ್ಲ. ೨೦೨೦ರಲ್ಲಿ ಅತ್ಯಂತ ಕಡಿಮೆ ಅವಧಿಯ ಸಂಸತ್ತಿನ ಅಧಿವೇಶನ ನಡೆದಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಕಲಾಪ ನಡೆದಿದ್ದು ಅಲ್ಲದೆ ವರ್ಷದಲ್ಲಿ ಕಡಿಮೆ ಪ್ರಮಾಣದ ಅಧಿವೇಶನ ಕರೆದಿರುವ ವಿಚಾರಕ್ಕೂ ವರ್ಷ ಸಾಕ್ಷಿಯಾಗಲಿದೆ.

೧೯೯೧ ರಲ್ಲಿ ವರ್ಷಕ್ಕೆ ಕೇವಲ ೬ ಸಂಸತ್‌ಅ ಧಿವೇಶನಗಳು ನಡೆದಿದ್ದವು. ಪದಾರ್ ನಂತರ ಏಳು ವರ್ಷಗಳಲ್ಲಿ ವರ್ಷಕ್ಕೆ ಕೇವಲ ಐದು ಅಧಿವೇಶನಗಳು ನಡೆದಿದ್ದವು. ೩೧ ವರ್ಷಗಳ ಅವಧಿಯಲ್ಲಿ ಕೇವಲ ನಾಲ್ಕು ಬಾರಿ ಅಧಿವೇಶನ ಸೇರಿದ ನಿದರ್ಶನ ಇದೆ. ಅದೇ ರೀತಿ ೨೭ ವರ್ಷಗಳಲ್ಲಿ ಕೇವಲ ಮೂರು ಬಾರಿ ಸಂಸತ್ ಅಧಿವೇಶನ ಸೇರಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

೧೯೫೨ ರ ಲ್ಲಿ ರಾಜ್ಯಸಭೆ ಎರಡು ಬಾರಿ ಸಮಾವೇಶಗೊಂಡಿತು. ಮೇಲ್ಮನೆಯ ಮೊದಲ ವರ್ಷದ ಅಧಿವೇಶನ ಇದಾಗಿತ್ತು. ೨೦೦೮ ರಲ್ಲಿ ಪ್ರತಿಯೊಂದು ಅಧಿವೇಶನ ೨ ಭಾಗಗಳಾಗಿ ನಡೆದಿತ್ತು. ಬಜೆಟ್ ಮುಂಗಾರು ಹಾಗೂ ಚಳಿಗಾಲದ ಅಧಿವೇಶನ ಗಳನ್ನು ಒಗ್ಗೂಡಿಸಿ ಈ ರೀತಿ ಮಾಡಲಾಗಿತ್ತು.

ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಪಡಿಸಿದರೆ ಪ್ರಸಕ್ತ ವರ್ಷದ ಮೂರು ಅಧಿವೇಶನಗಳ ಮೇಲೆ ಸಾಂಕ್ರಮಿಕ ರೋಗದ ಪ್ರಭಾವ ಬೀರಿದೆ. ಈಗಾಗಲೇ ಎರಡು ಅಧಿವೇಶನಗಳನ್ನು ಹಲವಾರು ನಿರ್ಬಂಧಗಳ ನಡುವೆ ನಡೆಸಲಾಗಿದೆ.

೨೦೨೦ರ ಬಜೆಟ್ ಅಧಿವೇಶನವನ್ನು ಸಾಂಕ್ರಾಮಿಕ ರೋಗದಿಂದ ಮೊಟಕುಗೊಳಿಸಲಾಗಿತ್ತು. ಅದಾದ ಬಳಿಕ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು.