ಸಂಶೋಧನೆಯ ಉದ್ದೇಶ ಸ್ಪಷ್ಟವಾಗಿರಲಿ: ಪ್ರೊ. ಶಿವಪ್ರಸಾದ್

ತುಮಕೂರು, ನ. ೨೨- ಪಿಎಚ್‌ಡಿ ಅಭ್ಯರ್ಥಿಗಳು ಐನ್‌ಸ್ಟನಂತಹ ಅಲೋಚನೆಗಳನ್ನು ಹೊಂದಿರಬೇಕು. ತಾವು ಮಾಡುವ ಸಂಶೋಧನೆ ಕುರಿತು ಸ್ಪಷ್ಟ ಉದ್ದೇಶಗಳನ್ನು ಹೊಂದಿರಬೇಕು ಎಂದು ಧಾರವಾಡದ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ.ಎಸ್.ಎಂ.ಶಿವಪ್ರಸಾದ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನ ನಿರ್ದೇಶನಾಲಯದ ವತಿಯಿಂದ ಸಂಶೋಧನೆ- ಅನ್ವೇಷಣಾ ಸಂಸ್ಕೃತಿನ್ನು ಬೆಳೆಸುವ ಬಗೆ’ ಕುರಿತ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಆಲ್ಬರ್ಟ್ ಐಸ್ಟ್‌ನ್ ಜಗತ್ತಿನ ದೊಡ್ಡ ಸಂಶೋಧನಕಾರು. ಕಾರು, ಬಂಗಲೆ, ಒಡವೆ ಮತ್ತು ಹಣದ ಆಸೆಗಳಿಗೊಳಗಾದೆ ಸರಳ ಜೀವನ ನಡೆಸಿದವರು. ನಾವು ಕೂಡಾ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಗುರಿ ಸಾಧಿಸೋಣ. ಹಣ, ಸಂಪತ್ತು, ಕಾರು, ಬಂಗಲೆ ತಾವಾಗಿಯೇ ನಮ್ಮ ಹಿಂದೆ ಬರುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಕರ್ನಲ್ (ಪ್ರೊ.)ವೈ.ಎಸ್. ಸಿದ್ದೇಗೌಡ ಮಾತನಾಡಿ, ವಿಶ್ವವಿದ್ಯಾನಿಲಯಕ್ಕೆ ಹೊಣೆಗಾರಿಕೆ, ಸಮಾನತೆ, ಪ್ರವೇಶಿಸುವಿಕೆ ಎಂಬ ಆಧಾರ ಸ್ತಂಬಗಳಿರುತ್ತವೆ. ತುಮಕೂರು ವಿವಿ ಕೂಡ ಈ ಸ್ತಂಭಗಳ ಮೇಲೆಯೇ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಮಾಜ ಮತ್ತಷ್ಟು ಪ್ರಗತಿ ಕಾಣಬೇಕಾದರೆ ಕೆಲಸಗಳಲ್ಲಿ ಉತ್ಸುಕನಾಗಿ, ಅನುಸರಿಸುವ ಗುಣವನ್ನು ಹೊಂದಿದ್ದು, ಸಮಾಜವನ್ನು ಮುನ್ನಡೆಸಬೇಕು. ಜ್ಞಾನ, ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳನ್ನು ಬಳಸಿಕೊಳ್ಳಬೇಕು. ಸ್ವಂತಿಕೆಯಿಂದ ಸಂಶೋಧನೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಉಪಕುಲ ಸಚಿವೆ ಡಾ.ಎಂ.ಮಂಗಳಾಗೌರಿ, ಕಾರ್ಯಕ್ರಮದ ಸಂಯೋಜಕ ಡಾ.ರಮೇಶ್‌ಸಾಲಿಯಾನ ಮತ್ತಿತರರು ಉಪಸ್ಥಿತರಿದ್ದರು.