ಸಂಶೋಧನೆಯು ಸಾಮಾಜಿಕ ಅಗತ್ಯ ಪೂರೈಸುವಂತಿರಬೇಕು

ಕಲಬುರಗಿ,ಸೆ.4:”ಸಂಶೋಧನೆಯು ಸಾಮಾಜಿಕ ಅಗತ್ಯಗಳನ್ನು ಪೂರೈಸುವಂತಿರಬೇಕು” ಎಂದು ಐಸಿಎಸ್‍ಎಸ್‍ಆರ್-ಎಸ್‍ಆರ್‍ಸಿ, ಹೈದರಾಬಾದ್ನ ಗೌರವ ನಿರ್ದೇಶಕ ಪೆÇ್ರ. ಬಿ. ಸುಧಾಕರ್ ರೆಡ್ಡಿ ಹೇಳಿದರು.
ಹೈದರಾಬಾದ್‍ನ ಐಸಿಎಸ್‍ಎಸ್‍ಆರ್-ಎಸ್‍ಆರ್‍ಸಿ ಪ್ರಾಯೋಜಿತದೊಂದಿಗೆ ಸಿಯುಕೆಯ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಆಯೋಜಿಸಿದ್ದ ‘ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ವಿಧಾನ’ ಕುರಿತ ಒಂದು ವಾರದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣ ಮಾಡಿದರು. ಅವರು ಮುಂದುವರೆದು ಮಾತನಾಡಿ “ಸಂಶೋಧಕರು ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಂಶೋಧನೆಯು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಆದ್ದರಿಂದ ಐಸಿಎಸ್‍ಎಸ್‍ಆರ್ ವಿವಿಧ ಸಂಶೋಧನಾ ಯೋಜನೆಗಳು ಮತ್ತು ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮಗಳಿಗೆ ಧನಸಹಾಯ ನೀಡುತ್ತಿದೆ. ಶಿಕ್ಷಣತಜ್ಞರು ನಡೆಸಿದ ಸಂಶೋಧನೆಯು ನೀತಿ ರಚನೆ ಮತ್ತು ಆಡಳಿತಾತ್ಮಕ ನಿರ್ಧಾರಕ್ಕೆ ಸಹಕಾರಿಯಾಗುತ್ತವೆ. ಐಸಿಎಸ್‍ಎಸ್‍ಆರ್ ಭಾರತದಲ್ಲಿನ ಸಮಾಜ ವಿಜ್ಞಾನ ಸಂಶೋಧನೆಗಳಿಗೆ ಧನಸಹಾಯ ನೀಡುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಅಧ್ಯಾಪಕರು ಮತ್ತು ಸಂಶೋಧಕರು ಸಮಾಜದ ಜ್ವಲಂತ ಸಮಸ್ಯೆಗಳನ್ನು ಮತ್ತು ಸಂಶೋಧನೆಯ ಸಂಭಾವ್ಯ ಕ್ಷೇತ್ರಗಳನ್ನು ಗುರುತಿಸಬೇಕು ಮತ್ತು ಆ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು” ಎಂದು ಹೇಳಿದರು.
ಸನ್ಮಾನ್ಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ “ಸಮಾಜ ಬಹಳ ವೇಗವಾಗಿ ಬದಲಾಗುತ್ತಿದೆ; ತಂತ್ರಜ್ಞಾನವು ಬದಲಾಗುತ್ತಿದೆ ಮತ್ತು ಅದೇ ರೀತಿಯಲ್ಲಿ ಸಮಸ್ಯೆಗಳು ಸಹ ಕ್ರಿಯಾತ್ಮಕವಾಗಿವೆ. ಆದ್ದರಿಂದ, ಸುಧಾರಿತ ತಂತ್ರಜ್ಞಾನ, ಕಠಿಣ ಸಂಶೋಧನಾ ವಿಧಾನ ಪರಿಕರಗಳ ಬಳಕೆಯೊಂದಿಗೆ ನಾವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕು. ಭಾರತ ಸರ್ಕಾರವು ಸಮಾಜ ಮತ್ತು ಸಂಶೋಧನಾ ಸಮುದಾಯದ ಪ್ರಯೋಜನಕ್ಕಾಗಿ ಸಾಕಷ್ಟು ಮೊತ್ತವನ್ನು ವ್ಯಯಿಸುತ್ತಿದೆ, ನಾವು ಭವಿಷ್ಯದ ಸುಧಾರಣೆಗಾಗಿ ಅದನ್ನು ಬಳಸಿಕೊಳ್ಳಬೇಕು” ಎಂದು ಹೆಳಿದರು.
ಡೀನ್, ಸ್ಕೂಲ್ ಆಫ್ ಬ್ಯುಸಿನೆಸ್ ಸ್ಟಡೀಸ್ ಮತ್ತು ಆರ್ಥಿಕ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪೆÇ್ರ. ಪುμÁ್ಪ ಸವದತ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಂಶೋಧನಾ ವಿದ್ವಾಂಸರು ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರೀಯ ಸಾಧನಗಳ ಮಹತ್ವ ಮತ್ತು ಸೂಕ್ತ ಬಳಕೆಯನ್ನು ತಿಳಿದುಕೊಳ್ಳಬೇಕು. ಸಂಶೋಧನೆಯಲ್ಲಿ ದತ್ತಾಂಶ ವಿಶ್ಲೇಷಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ಸಂಶೋಧಕರಿಗೆ ದತ್ತಾಂಶವನ್ನು ಅರ್ಥಮಾಡಿಕೊಳ್ಳಲು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸಂಶೋಧನಾ ವಿಧಾನದ ಉತ್ತಮ ಜ್ಞಾನ ಬಹಳ ಮುಖ್ಯ” ಎಂದು ಅವರು ಹೇಳಿದರು.
ಕಾರ್ಯಾಗಾರದ ಸಂಚಾಲಕ ಡಾ. ಲಿಂಗಮೂರ್ತಿ ಎಲ್ಲ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ “ಪರಿಣಾಮಕಾರಿ ಸಂಶೋಧನಾ ಜ್ಞಾನಕ್ಕಾಗಿ ಸಂಶೋಧನಾ ವಿಧಾನದ ಜ್ಞಾನವು ಬಹಳ ಮುಖ್ಯವಾಗಿದೆ. ಆದ್ದರಿಂದ ಈ ಒಂದು ವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಮತ್ತು ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳನ್ನು ತಜ್ಞರು ಚರ್ಚಿಸುತ್ತಾರೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ ಪೆÇ್ರ. ಆರ್ ಆರ್ ಬಿರದಾರ, ಸಿಒಇ, ಕೋಟ ಸಾಯಿಕೃಷ್ಣ, ಪೆÇ್ರ. ಬಸವರಾಜ ಡೋಣೂರ, ಡಾ.ಬಸವರಾಜ್ ಎಂಎಸ್, ಡಾ.ಸುಮಾ ಸ್ಕಾರಿಯಾ, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯರ್ಥಿಗಳು ಉಪಸ್ಥಿತರಿದ್ದರು.