ಸಂಶೋಧನೆಗೆ ಸಂಬಂಧಿಸಿದ ಮಾಸ ಪತ್ರಿಕೆಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಿ – ಡಾ.ಟಿ.ಶ್ರೀನಿವಾಸ

ರಾಯಚುರು.ನ.೦೯-ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಓದಿನ ಜೊತೆಗೆ ಔಷಧ ಶಾಸ್ತ್ರದಲ್ಲಿ ಲಭ್ಯವಿರುವ ಸಂಶೋಧನೆಗೆ ಸಂಬಂಧಿಸಿದ ಮಾಸ ಪತ್ರಿಕೆಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ನವೋದಯ ಶಿಕ್ಷಣ ಸಂಸ್ಥೆಯ ಕುಲ ಸಚಿವರಾದ ಡಾ.ಟಿ. ಶ್ರೀನಿವಾಸ ಅವರು ಸಲಹೆ ಮಾಡಿದರು.
ನಗರದ ಎನ್‌ಇಟಿ ಫಾರ್ಮಸಿ ಮಹಾವಿದ್ಯಾಲಯದಲ್ಲಿ ಮೊದಲನೇ ವರ್ಷದಲ್ಲಿ ಪ್ರವೇಶ ಪಡೆದ ಡಿ.ಫಾರ್ಮ, ಬಿ.ಫಾರ್ಮ, ಫಾರ್ಮ.ಡಿ ಹಾಗೂ ಎಂ.ಫಾರ್ಮ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕೋರ್ಸ್ ಇಂಡಕ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರೋಗಿಯ ಆರೋಗ್ಯದ ಸುರಕ್ಷತೆಯಲ್ಲಿ ಫಾರ್ಮಾಸಿಸ್ಟ್‌ಗಳು ಮಾಡುತ್ತಿರುವ ಕೆಲಸಗಳನ್ನು ವಿಸ್ತಾರವಾಗಿ ವಿವರಿಸಿದರು.
ರೋಗಿಗಳು ಸುರಕ್ಷತೆಗಾಗಿ ಫಾರ್ಮಾಸಿಸ್ಟ್‌ಗಳು ಇತರೆ ಆರೋಗ್ಯ ವಿಭಾಗಗಳಾದ ವೈದ್ಯಕೀಯ, ದಂತೆ ಹಾಗೂ ನರ್ಸಿಂಗ್ ವಿಭಾಗಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕೆಂದು ಡಾ.ಟಿ. ಶ್ರೀನಿವಾಸ ತಿಳಿಸಿದರು.
ಅತಿಥಿ ನವೋದಯ ಆಸ್ಪತ್ರೆಯ ಸೂಪರಿಡೆಂಟ್ ಬ್ರಿಗೇಡಿಯರ್ ಡಾ. ಅಶೋಕ ಮಹೇಂದ್ರಕರ್ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಒಳ್ಳೆಯ ಫಲಿತಾಂಶವನ್ನು ತರಬೇಕೆಂದು ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್. ದೊಡ್ಡಯ್ಯ ಮಾತನಾಡಿ, ಎನ್‌ಇಟಿ ಫಾರ್ಮಸಿ ಕಾಲೇಜಿನಲ್ಲಿ ಇರುವಂತಹ ಸೌಲಭ್ಯಗಳಾದ ನುರಿತ ಶಿಕ್ಷಕರ ತಂಡ, ಅತ್ಯುತ್ತಮ ಗ್ರಂಥಾಲಯ ಹಾಗೂ ಪ್ರಾಯೋಗಿಕ ಕೇಂದ್ರಗಳ ಬಗ್ಗೆ ಸವಿಸ್ತಾರವಾಗಿ ನೂತನ ವಿದ್ಯಾರ್ಥಿಗಳಿಗೆ ತಿಳಿಸಿದರು.
ಫಾರ್ಮಸೂಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಜ್ಞಾ ಪಾಟೀಲ್, ಫಾರ್ಮಸೂಟಿಕಲ್ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಡಾ.ಚಂದ್ರಮೌಳಿ ಹಾಗೂ ಫಾರ್ಮಸಿ ಪ್ರಾಕ್ಟಿಸ್ ವಿಭಾಗ ಪ್ರಾಧ್ಯಾಪಕ ಡಾ. ಶಿವಕುಮಾರ ಡಿ.ಫಾರ್ಮ, ಬಿ.ಫಾರ್ಮ ಹಾಗೂ ಬಿ.ಫಾರ್ಮ ಡಿ.ಕೋರ್ಸ್‌ಗಳ ಬಗ್ಗೆ ಹಾಗೂ ಅವುಗಳ ಮಹತ್ವವನ್ನು ತಿಳಿಸಿದರು.
ಫಾರ್ಮಸೂಟಿಕ್ಸ್ ವಿಭಾಗ ಪ್ರಾಧ್ಯಾಪಕ ಡಾ.ಸರಫರಾಜ ವಿದ್ಯಾರ್ಥಿಗಳಿಗೆ ಫಾರ್ಮಾಸಿಸ್ಟ್ ಪ್ರತಿಜ್ಞಾ ವಿಧಿಯನ್ನು ಎಲ್ಲಾ ಬೋಧಿಸಿದರು. ನವೋದಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ. ವಿಜಯ ಚಂದ್ರ ಅವರು ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವೇದಿಕೆಯ ಮೇಲಿರುವ ಗಣ್ಯರು ಫಾರ್ಮಾ ಫೋಕಸ್ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಡಾ.ಟಿ.ಶಿವರಾಜಗೌಡ ಸ್ವಾಗತಿಸಿದರು. ಫಾರ್ಮಸಿ ಪ್ರಾಕ್ಟೀಸ್ ವಿಭಾಗ ಉಪನ್ಯಾಸಕ ಡಾ.ರಾಹುಲ್ ಕೆ.ವಂದಿಸಿದರು. ಫಾರ್ಮಾ ಕೋಲಜಿ ವಿಭಾಗ ಉಪನ್ಯಾಸಕಿ ಶಿವಾನಿ ನಿರೂಪಿಸಿದರು.