ಸಂಶೋಧನೆಗೆ ಶೃಂಗ ಸಭೆಯಲ್ಲಿ ಪ್ರಶಂಸೆ

ಧಾರವಾಡ, ಆ21: ಸಿಐಐ ಬೆಂಗಳೂರಿನಲ್ಲಿ ಆಯೋಜಿಸಿದ್ದ 19ನೇ ಭಾರತೀಯ ಆವಿಷ್ಕಾರ ಶೃಂಗಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೆಎಲ್‍ಎಸ್ ವಿಡಿಐಟಿಯ ಮಹಾವಿದ್ಯಾಲಯದ ಸಮಾಜಪಯೋಗಿ ಸಂಶೋಧನಾ ಕಾರ್ಯವನ್ನು ವೀಕ್ಷಿಸಿದರು.
ಈ ಶೃಂಗಸಭೆಯಲ್ಲಿ ಮಹಾವಿದ್ಯಾಲಯದ ಸಂಶೋಧನಾ ಕಾರ್ಯವಾದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನದಿಂದ ದಾಳಿಂಬೆ ಎಲೆ ರೋಗ ಪತ್ತೆ ಮಾಡುವುದನ್ನು ಮತ್ತು ವೆಲ್ಡಿಂಗ್ ಕ್ಷೇತ್ರದ ಆಧುನಿಕ ತಂತ್ರಜ್ಞಾನ ಪ್ರದರ್ಶಿಸಲಾಯಿತು.
ಖ್ಯಾತ ಉದ್ಯಮಿಗಳಾದ ಕ್ರಿಸ್ ಗೋಪಾಲ್ ಕೃಷ್ಣ, ಕಮಲ್ ಬಾಲಿ ಸಂಶೋಧನಾ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರಮಟ್ಟದ ಶೃಂಗಸಭೆಯಲ್ಲಿ ಮಹಾವಿದ್ಯಾಲಯದ ಸಂಶೋಧನಾ ಕಾರ್ಯವನ್ನು ಪ್ರಶಂಶಿಸಿರುವುದು ಹರ್ಷ ತಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನಾಯಕ್ ಲೋಕುರ್, ಪ್ರಾಚಾರ್ಯರಾದ ಡಾ. ವಿ ಎ ಕುಲಕರ್ಣಿ ಹೇಳಿದ್ದಾರೆ. ಪೆÇ್ರ. ರಜತ್ ಆಚಾರ್ಯ, ಪೆÇ್ರ. ಗುರುನಾಥ ಎಂ, ಪೆÇ್ರ. ರಾಘವೇಂದ್ರ ಎನ್ ಮತ್ತು ವಿದ್ಯಾರ್ಥಿ ಕೇಶವ್ ಶೃಂಗಸಭೆಯಲ್ಲಿ ಮಹಾವಿದ್ಯಾಲಯವನ್ನು ಪ್ರತಿನಿಧಿಸಿದ್ದರು.