ಸಂಶೋಧನೆಗಾಗಿ ಹಂಗೇರಿಗೆ ಸ್ನೇಹಾ, ವಿಶಾಲಾಕ್ಷಿ

ದಾವಣಗೆರೆ.ಏ.೨೫: ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತç ಅಧ್ಯಯನ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಉನ್ನತ ಸಂಶೋಧನೆಗಾಗಿ ಹಂಗೇರಿಯ ಮಿಸ್ಕಾಲ್ಕ್ ವಿಶ್ವವಿದ್ಯಾನಿಲಯಕ್ಕೆ ಏಪ್ರಿಲ್ ೨೫ರಂದು ತೆರಳಲಿದ್ದಾರೆ.ಯುರೋಪಿನ ಯುವಜನತೆ, ಶಿಕ್ಷಣ, ಕ್ರೀಡೆ ಬೆಳವಣಿಗೆಗೆ ಸಹಕಾರ (ಎರಾಸ್ಮಸ್) ಮತ್ತು ಅಂತರರಾಷ್ಟಿçÃಯ ಶೈಕ್ಷಣಿಕ ಸಂಶೋಧನಾ ವಿನಿಯೋಗ ಯೋಜನೆಯಡಿ ದಾವಣಗೆರೆ ವಿಶ್ವವಿದ್ಯಾನಿಲಯದ ಡಾ.ಕೆ.ಎನ್.ಸ್ನೇಹಾ ಮತ್ತು ಡಾ.ಎ.ಬಿ.ವಿಶಾಲಾಕ್ಷಿ ಅವರು ಮೂರು ತಿಂಗಳು ಮಿಸ್ಕಾಲ್ಕ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆಸಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೊ.ಯು.ಎಸ್.ಮಹಾಬಲೇಶ್ವರ ಮತ್ತು ಮಿಸ್ಕಾಲ್ಕ್ ವಿಶ್ವವಿದ್ಯಾನಿಲಯದ ಪ್ರೊ.ಬಾಗ್ನಾರ್ ಗ್ಯಾಬ್ರಿಯೆಲಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ದ್ರವ ಚಲನಶಾಸ್ತçದಲ್ಲಿ ಸಂಶೋಧನೆ ನಡೆಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಭಿನಂದಿಸಿ, ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಪ್ರೊ.ಕೆ.ಬಿ.ರಂಗಪ್ಪ, ಪ್ರೊ.ಯು.ಎಸ್.ಮಹಾಬಲೇಶ್ವರ, ಡಾ.ಅಶೋಕಕುಮಾರ ಪಾಳೇದ, ಶಿವಕುಮಾರ ಕಣಸೋಗಿ ಉಪಸ್ಥಿತರಿದ್ದರು.