ಸಂಶೋಧನೆಗಳ ಮೂಲಕ ನಿರಂತರ ಕಲಿಕೆ ಅಗತ್ಯ

(ಸಂಜೆವಾಣಿ ವಾರ್ತೆ)
ಬಾಗಲಕೋಟೆ,ಆ25: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದ ನಂತರ ಹೊಸ ಸಂಶೋಧನೆಗಳ ಮೂಲಕ ನಿರಂತರ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಬೆಂಗಳೂರಿನ ನಿಮ್ಹಾನ್ಸ ಇಂಟಿಗ್ರೇಟೀವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಆರ್. ಕಿಶೋರಕುಮಾರ ಹೇಳಿದರು.
ಅವರು ಬಸವೇಶ್ವರ ಹೊಸ ಸಭಾಂಗಣದಲ್ಲಿ ನಡೆದ ಬಾಗಲಕೋಟೆಯ ಪ್ರತಿಷ್ಠಿತ ಬ.ವಿ.ವ. ಸಂಘದ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿಶಿಕಾನುಪ್ರವೇಶ -2023 ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಅಧ್ಯಯನ ವಿದ್ಯಾರ್ಥಿಗಳಲ್ಲಿ ನಿರಂತರವಾಗಿರಬೇಕು, ಹೊಸ ಹೊಸ ಸಂಶೋಧನೆಗಳ ಪ್ರಕಟಣೆ ಜೊತೆಗೆ ಇತರ ವೈದ್ಯ ಪದ್ದತಿಯ ವೈದ್ಯರೊಂದಿಗೆ ಉತ್ತಮ ಭಾಂದವ್ಯ ಹಾಗೂ ಚಿಕಿತ್ಸಾ ಪದ್ದತಿಗಳ ಸಂಯೋಜನೆಯು ಆಯುರ್ವೇದ ಪದ್ದತಿಯ ನೂತನ ಪದವಿ ಪಡೆದ ವೈದ್ಯರಿಗೆ ಇನ್ನು ಹೆಚ್ಚು ಯಶಸ್ಸು ಸಾಧಿಸಲೂ ಅನುಕೂಲವಾಗಲಿದೆ, ಭಾರತೀಯ ಸಾಂಪ್ರಾದಾಯಕ ವೈದ್ಯ ಪದ್ದತಿಯಗಳಾದ ಆಯುರ್ವೇಧ,ಯೋಗ,ಯುನಾನಿ,ಹೋಮಿಯೋಪತಿ ಇತ್ಯಾದಿ ಸೇರಿದಂತೆ ಮೊದಲಾದವುಗಳು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಚಿಕಿತ್ಸೆ ಕೊಟ್ಟು ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿವೆ, ಅದರಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಯುಷ ಮಂತ್ರಾಲಯದ ಮೂಲಕ ಆಯುಷ್ ವೈದೈರ ಸೇವೆಯನ್ನು ಎಲ್ಲರಿಗೂ ತಲುಪುವಂತೆ ಮಾಡಿದ್ದಾರೆ, ನಮ್ಮ ಭಾರತದಲ್ಲಿ ಶಿಕ್ಷಣ ಅನ್ನೋದು ಹಣ ಮಾಡುವುದಕ್ಕೆ ಇರುವ ವಸ್ತು ಅಲ್ಲಾ, ಇದೊಂದು ಸೇವೆಯಂದು ಭಾರತದಲ್ಲಿ ಅನಾದಿಕಾಲದಿಂದ ವೈದ್ಯವೃತ್ತಿಯನ್ನು ಮಾಡಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ.ಎನ್. ಅಥಣಿ ವಿದ್ಯಾರ್ಥಿಗಳು ವೈದ್ಯರಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲಿ ಎಂದರು.
ವೇದಿಕೆ ಮೇಲೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ .ಎಸ್. ಸಾಸನೂರ ಇವರು ಉಪಸ್ಥಿತರಿದ್ದರು, ಸಮಾರಂಭದಲ್ಲಿ ಮಹಾವಿದ್ಯಾಲಯದಿಂದ ಬಿ.ಎ.ಎಮ್.ಎಸ್. ಪದವಿ ಪಡೆದ ಸುಮಾರು 145 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಅಲ್ಲದೆ ಆರ್.ಜಿ.ಯು.ಎಚ್.ಎಸ್ ಬೆಂಗಳೂರು ದಿಂದ ಸಂಶೋಧನಾ ಅನುದಾನಗಳನ್ನು ಪಡೆದ ಬೋದಕ ಹಾಗೂ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಡಾ.ಜಿ.ಎಸ್.ಕುಲಕರ್ಣಿ ಸ್ವಾಗತಿಸಿದರು, ಡಾ.ಪ್ರಕಾಶ ನರಬೋಳೆ ವಂದಿಸಿದರು. ಡಾ.ಸುನಿಲಕುಮಾರ ಕಾರ್ಯಕ್ರಮ ನೀರೂಪಿಸಿದರು.