ಸಂಶೋಧನಾ ಜ್ಞಾನವನ್ನು ಅಭಿವ್ಯಕ್ತಿಸುವುದು ಮುಖ್ಯ

ಬಳ್ಳಾರಿ ಡಿ 30 : ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿನ್ನೆ “ಏ.ಐ.ಸಿ.ಟಿ.ಈ ಸ್ಫಾನ್ಸರ್ಡ್ ಇಂಟರ್ನೇಷನಲ್ ಕಾನ್ಫರನ್ಸ್ ಆನ್ ಪಾಟರ್ನ್ ರಿಕಗ್ನೇಷನ್ ಅಪ್ಲೀಕೇಷನ್ಷ್ ಮತ್ತು ಮೆಥಡ್ಸ್ ಕಾರ್ಯಾಗಾರದ ಸಮಾರೋಪ ಸಮಾರಂಭವು ಜರುಗಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಂಸ್ಟಿಟೂಟ್-ಆಫ್-ಸ್ಕಾಲರ್ಸ್‍ನ ಸಂಸ್ಥಾಪಕ ಡಾ||ನಂಜೇಷ್ ಬೆನ್ನೂರ್ “ಅಂತರಷ್ಟ್ರೀಯ ಮಟ್ಟದಲ್ಲಿ ಹ¯ವಾರು ತಾಂತ್ರಿಕ ತಾಂತ್ರಿಕೇತರ ಜರ್ನಲ್ / ನಿಯತಕಾಲಿಕ ಪ್ರಕಾಶಕನಗಳಿವೆ. ಉದಾಹರಣೆಗೆ ಥಾಮ್ಸನ್-ರಾಯಿಟರ್ಸ್, ಸ್ಪ್ರಿಂಜರ್, ಐ.ಇ.ಇ.ಇ, ಮುಂತಾದುವು ವಿಶ್ವ ಒಪ್ಪಿತವಾದುವು, ಹಾಗೆಯೇ ಇವು ಹೆಚ್ಚುವೆಚ್ಚದ ಜರ್ನಲ್‍ಗಳಾಗಿವೆ, ಆದರೇ ನಮ್ಮದೇ ದೇಶದಿಂದ ಜಗತ್ಪ್ರಸಿದ್ದ ಜರ್ನಲ್‍ಗಳ ಕೊರತೆಯಿದೆ, ಅಲ್ಲದೇ ಇತರ ದೇಶಗಳನ್ನು ಹೋಲಿಸಿದರೆ, ನಮ್ಮದೇಶದಲ್ಲಿ ಹೆಚ್ಚಿನ ಜನಸಂಖ್ಯೆಯಿದ್ದು, ಹೆಚ್ಚುವರಿ ಸಂಶೋಧನೆಗಳು, ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಲಿವೆ, ಸಂಶೋಧನಾ ಜ್ಞಾನವನ್ನು ಅಭಿವ್ಯಕ್ತಿಸುವುದು ಮುಖ್ಯ , ಇದರಿಂದ ವಿಮರ್ಶಾತ್ಮಕಮೆಚ್ಚುಗೆ, ಪರಿಶೀಲನೆ, ಸುಧಾರಣೆ, ಹಾಗು ಅಭಿವೃದ್ದಿ ಪಡಿಸಿ,ಅಳವಡಿಸಲು ಅನುಕೂಲಕರವಾಗುವುದು. ನೀವು ನಿಮ್ಮ ಸಂಶೋಧನೆಗಳಿಂದ ಆತ್ಮತೃಪ್ತಿ ಯಾಗುವುದು ಮುಖ್ಯ, ಸ್ವಯಂಚಾಲಿತವಾಗಿ ಆ ಸಂಶೋಧನೆ ಪ್ರಸಿದ್ದವಾಗುತ್ತದೆ ಎಂಬುವುದು ನೆನಪಿಡಬೇಕು ” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಟಿ. ಹನುಮಂತರೆಡ್ಡಿ ಸ್ವಾಗತಿಸಿ, “ಪಾಟರ್ನ್ ರಿಕಗ್ನೇಷನ್, ಅಪ್ಲೀಕೇಷನ್ಷ್, ಮೆಥಡ್ಸ್,” ಕಾನ್ಫರನ್ಸ್ ನ ಸಮಗ್ರವರದಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್. ಬಸವರಾಜ, ಪ್ರಾಂಶುಪಾಲರಾದ ಡಾ|| ಕುಪ್ಪಗಲ್ ವಿರೇಶ್, “ಮುಂದಿನದಿನಗಳಲ್ಲಿ ಇತ್ತೀಚಿನ ತಾಂತ್ರಿಕಾಭಿವೃದ್ದಿ ಕಾರ್ಯಕ್ರಮಗಳನ್ನು ಇನ್ನಿತರ ವಿಭಾಗಗಳಿಂದ ಆಯೋಜಿಸಲು ಸ್ಪೂರ್ತಿ ನೀಡಿದರು.
ಮೊದಲನೇಯ ಹಾಗು ಎರಡನೆಯ ದಿನದ ಕೀ-ನೋಟ್ ಮಾಲೆಯನ್ನು ಡಾ||ಪಿ.ನಾಗಭೂಷಣ್, ಡಾ|| ನೇಹಾ ಶರ್ಮ, ಡಾ||ಡಿ.ಎಸ್.ಗುರು, ಇನ್ನಿತರರು ಸಮರ್ಪಿಸಿದರು. ಹಾಗು ಈ ಎರಡು ದಿನದ ಪ್ರಭಂದ ಮಂಡನೆಯನ್ನು ಡಾ||ಗಿರಿಧರ್, ಡಾ|| ಕ್ರಿಷ್ಟೋಅನಂತ್, ಡಾ||ಸೆಂಧಿಲ್, ಡಾ||ನಿರಂಜನ್‍ಮೂರ್ತಿ, ಡಾ||ಸುನಿತ, ಇನ್ನಿತರರು ಮಂಡಿಸಿದರು