ಸಂಶೋಧನಾ ಕೇಂದ್ರದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ

ಸಂಜೆವಾಣಿ ವಾರ್ತೆ
ಸಿರುಗುಪ್ಪ, ಡಿ.06: ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಗಂಣದಲ್ಲಿ ಜಿಲ್ಲಾ  ರಾಷ್ಟ್ರೀಯ ಕೆಮಿಕಲ್ಸ್ ಪರ್ಟಿಲೈಸರ್ ಲಿ., ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆಯ ಸಹಯೋಗದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಎ.ಬಸವಣ್ಣೆಪ್ಪ, ಸಿರುಗುಪ್ಪ ಸಿಪಿಐ ಟಿ.ಆರ್.ಪವಾರ್, ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ, ಮಣ್ಣು ವಿಜ್ಞಾನಿ ಅಶೋಕ ಕುಮಾರ್ ಗಡ್ಡಿ, ರಾಷ್ಟ್ರೀಯ ಕೆಮಿಕಲ್ಸ್ ಪರ್ಟಿಲೈಸರ್ ಜಿಲ್ಲಾ ವ್ಯವಸ್ಥಾಪಕ ಗುರುಲಿಂಗನಗೌಡ, ಪ್ರಗತಿ ಪರ ರೈತ ರಾಮನಗೌಡ ಇದ್ದರು.