ಸಂಶಯಾಸ್ಪದ ಡೆಂಗ್ಯೂಜ್ವರ ಮುಂಜಾಗ್ರತಾ ಮನೆ ಮನೆಗೆ ಮಾಹಿತಿ

ಮಾನ್ವಿ.ಜ.೧೩-ತಾಲೂಕಿನ ಪೋತ್ನಾಳ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ ಇವರ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯೂ ಜ್ವರ ತಡೆಗಟ್ಟಲು ಪೋತ್ನಾಳ ಗ್ರಾಮದಲ್ಲಿ ಮನೆ ಮನೆ ಜಾಗೃತಿ ಮತ್ತು ಲಾರ್ವ ಸಮೀಕ್ಷೆ ಕಾರ್ಯಕ್ರಮಗಳನ್ನು ಎರಡು ತಂಡಗಳನ್ನಾಗಿ ಕೈಗೊಳ್ಳಲಾಗಿದ್ದು ಪ್ರತಿ ಮನೆ ಮನೆ ಜಾಗೃತಿ ಮಂಡಿಸಲಾಯಿತು.
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಡೆಂಗ್ಯೂ ಜ್ವರವು ಸೊಳ್ಳೆಗಳಿಂದ ಬರುವ ಪ್ರಾರಂಭದ ಹಂತದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಬೇಗನೆ ಗುಣಮುಖರಾಗಬಹುದು ಅದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ ಮನೆಯ ಸುತ್ತಮುತ್ತಲು ಶೇಖರಣೆಯಲ್ಲಿ ಇಟ್ಟಿರುವ ತೊಟ್ಟಿಗಳು ಬೆರಳುಗಳು ಡ್ರಮ್ ಗಳು ಹೂವಿನ ಕುಂಡಲು ಮುಂತಾದ ನೀರಿನ ಸಂಗ್ರಹ ತಾಣಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಜ್ವರ ಆಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಅದಕ್ಕಾಗಿ ತೆರೆದಿಟ್ಟ ನೀರಿನ ತೊಟ್ಟುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಚೆನ್ನಾಗಿ ಉಜ್ಜಿ ತೊಳೆದು ಭರ್ತಿ ಮಾಡಿ ಮುಚ್ಚಳದಿಂದ ಮುಚ್ಚಿಕೊಳ್ಳುವುದು ಬೈಲಿನಲ್ಲಿರುವ ಟೈರುಗಳನ್ನು ಬಿಸಾಡಿದ ಅವುಗಳಲ್ಲಿ ನೀರು ಸಂಗ್ರಹವಾಗದಂತೆ ಪ್ಲಾಸ್ಟಿಕ್ ಹಾಳೆಯನ್ನು ಮುಚ್ಚಿಡುವುದು ಇಲ್ಲವೇ ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವುದು ಮನೆಯ ಸುತ್ತಮುತ್ತಲು ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಹಿಡಿಸ್ ಸೊಳ್ಳೆಗಳು ಹಗಲು ಹೊತ್ತನಲ್ಲಿ ಮನುಷ್ಯರನ್ನು ಕಚ್ಚುವುದರಿಂದ ರೋಗ ಆಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಅದಕ್ಕಾಗಿ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದರಿಂದ ಸೊಳ್ಳೆ ಕಡಿಸಿದಂತಹ ಪಾಲಾಗುವುದಿಲ್ಲದೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಚೈತ್ರ. ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಕಲಾ ಆಶಾ ಕಾರ್ಯಕರ್ತೆ ಉಮಾದೇವಿ ಲಕ್ಷ್ಮಿ ಅಮರಮ್ಮ ಹಾಗೂ ಸಾರ್ವಜನಿಕರು ಹಾಜರಿದ್ದರು.