ಸಂವಿಧಾನ ಸರ್ವರಿಗೂ ಸಮಬಾಳು ಸಮಪಾಲು ನೀಡಿದೆ : ಕಾಸುಗೌಡ ಬಿರಾದಾರ

ಇಂಡಿ:ನ.28: ಸಂವಿಧಾನ ಸಮರ್ಪಣಾ ದಿನಾಚರಣೆ ನಿಮಿತ್ಯ ಭಾರತೀಯ ಜನತಾ ಪಕ್ಷ ಇಂಡಿ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೂರಾರು ಭಾಜಪ ಕಾರ್ಯಕರ್ತರು ಸಂವಿಧಾನ ಉಳಿಸಿ ದೇಶ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಸಂಚರಿಸಿ ಸಂವಿಧಾನ ಸಮರ್ಪಣಾ ದಿನಾಚರಣೆ ಮಾಡಿದರು.
ಈ ಸಂಧರ್ಬದಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಭಾರತೀಯ ಸಂವಿಧಾನ ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಬೃಹತ್ ಸಂವಿಧಾನವಾಗಿದೆ. ಸಂವಿಧಾನ ರಚನೆಯ ಪಿತಾಮಹ ಡಾ. ಬಿ.ಆರ್ ಅಂಬೇಡ್ಕರವರು ಇಡೀ ವಿಶ್ವದ ಚರೀತ್ರೆಯನ್ನೆ ಅಧ್ಯಾಯನ ಮಾಡಿ ಈ ದೇಶಕ್ಕೆ ಎಂತಹ ಸಂವಿಧಾನ ರಚನೆ ಮಾಡಿದರೆ ಒಳ್ಳೆಯದು ಎಂಬ ದೂರದೃಷ್ಠಿಯಿಂದ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿಯಲ್ಲಿ ಸಾಮಾಜಿಕ ನ್ಯಾಯ ನೀಡಿದ ಒಬ್ಬ ಶ್ರೇಷ್ಠ ತತ್ವಜ್ಞಾನಿ. ಸಂವಿಧಾನ ಇಡೀ ದೇಶವನ್ನು ಯಾವ ದಿಶೇಯತ್ತ ಸಾಗಬೇಕು ಎಂಬ ಮೂಲಪರಿಕಲ್ಪನೆಯಿಂದ ರಚನೆ ಮಾಡಿದ್ದಾರೆ. ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಭಾರತದ ಪ್ರಜೆಗಳಾದ ನಾವು ,ಭಾರತವನ್ನು ಸಾರ್ವಭೌಮ ,ಸಮಾಜವಾದಿ, ಜಾತ್ಯಾತೀತ ,ಪ್ರಜಾಸತ್ಯಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತ ಎಲ್ಲಾ ಪ್ರಜೆಗಳಿಗೆ ಸಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ,ಭ್ರಾತೃತ್ವ ಸಮಗ್ರತೆ ಮೂಡಿಸುವದಕ್ಕಾಗಿ ಧೃಢಸಂಕಲ್ಪ ಮಾಡಿಕೊಂಡು ನಮ್ಮ ಸಂವಿಧಾನ ಅರ್ಪಿಸಿಕೊಂಡ ಪವಿತ್ರದಿನ ಇಂತಹ ಪ್ರಜಾಪ್ರಭುತ್ವ ಬುನಾದಿಗೆ ಸಂವಿಧಾನ ಕೊಡುಗೆ ಅಪಾರ ಎಂದರು.
ಭಾಜಪ ಮುಖಂಡ ಹಣಮಂತರಾಯಗೌಡ ಪಾಟೀಲ ಮಾತನಾಡಿದರು,ಎಸ್.ಸಿ ಮೋರ್ಚಾ ಅಧ್ಯಕ್ಷ ರಮೇಶ ಧರೇನವರ್, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಗಣಪತಿ ಬಾಣಿಕೋಲ,ಶ್ರೀನಿವಾಸ ಕಂದಗಲ ಸಂವಿಧಾನ ಆಶೋತ್ತರ ಇಡೇರಿಸಲು ನಾವೇಲ್ಲರೂ ಧೃಢಸಂಕಲ್ಪ ಮೋಡೋಣ ಎಂದು ಪ್ರತಿಜ್ಞೆ ಗೈದರು.
ಶೀಲವಂತ ಉಮರಾಣಿ, ದೇವೇಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸಿಂದಲಿಂಗ ಹಂಜಗಿ, ವಿಜಯಕುಮರ ಮೂರಮನ್,ಶ್ರೀಮಂತ ಮೋಗಲಾಯಿ, ಪಿಂಟು ರಾಠೋಡ, ಶಿವಯೋಗಿ ರೂಗಿಮಠ, ಸೋಮು ನಿಂಬರಗಿಮಠ, ಗೋವಿಂದ ರಾಠೋಡ, ವಿಜಯಲಕ್ಷ್ಮೀ ರೂಗಿಮಠ, ಅನುಸುಯ್ಯಾ ಮದರಿ, ಸುನಂದಾ ಗಿರಿವಡ್ಡರ್, ಕವಿತಾ ಅಳೋಳ್ಳಿ, ,ಬೌರಮ್ಮಾ ನಾವಿ, ಸುನಂದಾ ಗಿರಣಿವಡ್ಡರ್ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.