ಸಂವಿಧಾನ ಸಮರ್ಪಣಾ ಪ್ರತಿಜ್ಞಾವಿಧಿ ದಿನ ವಿಭಿನ್ನ ಆಚರಣೆ

(ಸಂಜೆವಾಣಿ ವಾರ್ತೆ)
ಇಂಡಿ: ನ.27:ಸಂವಿಧಾನ ರಚನೆ ಕರಡು ಸಮಿತಿಯ ಅಧ್ಯಕ್ಷ ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಕರಡು ಸಮಿತಿಯ ಸದಸ್ಯರು ಡಾ. ರಾಜೇಂದ್ರ ಪ್ರಸಾದ, ಸರ್ದಾರ ವಲ್ಲಭಾಯಿ ಪಟೇಲ ಹಾಗೂ ಇತರೆ ಸಮಿತಿಯ ಸದಸ್ಯರುಗಳ ವೇಷ-ಭೂಷಣ ಧರಿಸಿ. ತಂಡದೊಂದಿಗೆ ಸಂವಿಧಾನ ಬದ್ದವಾಗಿ ಕೋವಿಡ್ ಲಸಿಕೆ ಪಡೆಯಿರಿ ರಾಷ್ಟ್ರದ ಹಿತಕ್ಕಾಗಿ ಕೋವಿಡ್ ಲಸಿಕೆ ಪಡೆಯಿರಿ ಎಂಬ ಘೋಷಣೆಯೊಂದಿಗೆ ತಾಲೂಕಿನ ಹಂಚನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಹಾಗೂ ಚಿಕ್ಕಬೇವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಶು ಅಭಿವೃಧ್ಧಿ ಇಲಾಖೆಯ ಯೊಜನಾ ತಂಡದಿಂದ. ಲಸಿಕೆ ನಿರಾಕರಣೆ ಹಂಚಿನಾಳ ಗ್ರಾಮದ ಅಂಬೇಡ್ಕರ ನಗರ ಪ್ರದೇಶದಲ್ಲಿ ಶೇ50% ರಷ್ಟು ಈ ದಿನದಂದು ಯಶಸ್ವಿ ಲಸಿಕಾ ಶಿಬಿರ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸುವುದರ ಮೂಲಕ ಸಂವಿಧಾನ ಸಮರ್ಪಣಾ ಪ್ರತಿಜ್ಞಾವಿಧಿ ದಿನವನ್ನು ಆಚರಿಸಿದರು.