ಸಂವಿಧಾನ ಸಂರಕ್ಷಣಾ ಜಾಥಾ

ಬಂಗಾರಪೇಟೆ. ಜ೧೨: ಪಟ್ಟಣದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ದಮನಿತರ ಸಂಘರ್ಷ ಸಮಿತಿ ವತಿಯಿಂದ ಕೋಲಾರದಿಂದ ಫ್ರೀಡಂ ಪಾರ್ಕ್ ಬೆಂಗಳೂರಿನವರೆಗೆ ಸಂವಿಧಾನ ಸಂರಕ್ಷಣಾ ಜಾಥಾ ಕಾರ್ಯಕ್ರಮಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ದಮನಿತರ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಕದರೇನಹಳ್ಳಿ ಕುಮಾರ್ ಅವರು ತಿಳಿಸಿದ್ದಾರೆ. ಅವರು ಈ ಕುರಿತು ಮಾತನಾಡುತ್ತಾ, ಇಂದು ದಲಿತ ಸಂಘಟನೆಗಳ ಒಕ್ಕೂಟ ಸೇರಿಕೊಂಡು ಜಾಥಾ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಮೊದಲಿಗೆ ಈ ಜಾಥಾ ಕಾರ್ಯಕ್ರಮವು ದೇಶಿಹಳ್ಳಿಯಿಂದ ಪ್ರಾರಂಭವಾಗಿ, ಅಂಬೇಡ್ಕರ್ ಪ್ರತಿಮೆ ಮುಂದೆ ಹಾಗೂ ಬಂಗಾರಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತದನಂತರ ಮಾಲೂರು ಕಡೆ ಹೊರಟಿತು ಎಂದು ಹೇಳಿದರು.
ಸಂವಿಧಾನದ ಹಕ್ಕುಗಳು ಯಥಾವತ್ತಾಗಿ ಜಾರಿಯಾಗಬೇಕು ಮತ್ತು ಸಂವಿಧಾನ ಆಶಯಗಳು ಈಡೇರಬೇಕು. ಪಿ.ಟಿ.ಸಿ.ಎಲ್. ಕಾಯ್ದೆಯ ಆಶಯಗಳನ್ನು ಈಡೇರಿಸಬೇಕು.೧೯೬೨ರ ಕಾಲಮಿತಿ ಕಾಯ್ದೆಯ ನಿಯಮಾವಳಿಗಳು ಸದರಿ ಕಾಯ್ದೆಗೆ ಅನ್ವಯಿಸದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಮತ್ತು ಇತ್ತೀಚಿಗೆ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸಲ್ಲಿಸುವ ಮೂಲಕ ಸಮುದಾಯದ ಹಿತ ಕಾಪಾಡಬೇಕು. ಶೋಷಿತ ಸಮುದಾಯಗಳ ಹಿತಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. ಎನ್‌ಇಪಿ ಶಿಕ್ಷಣ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ಹಳೆ ಶಿಕ್ಷಣ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಹೀಗಿರುವಂತಹ ಸುಮಾರು ೨೮ ಸಾವಿರಕ್ಕೂ ಹೆಚ್ಚಿರುವ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಅನ್ನದಾತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳು ರದ್ದಾಗ ಬೇಕು. ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟುಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಸ್ಥಾಪಿಸಬೇಕು.
ಎಸ್. ಸಿ.ಎಸ್.ಪಿ. ಮತ್ತು ಟಿ ಎಸ್ ಪಿ ಕಾಯ್ದೆ ಸಂಪೂರ್ಣ ಜಾರಿಯಾಗಬೇಕು ಮತ್ತು ಕಾಲಂ ೭ ಡಿ ರದ್ದಾಗ ಬೇಕು. ೨೦೧೮ ರಿಂದ ೨೦೨೨ರವರೆಗೂ ಸದರಿ ಕಾಯ್ದೆಯ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಹಾಗೂ ಈ ಅನುದಾನವನ್ನು ದುರ್ಬಲಕೆ ಮಾಡಿಕೊಂಡಿರುವ ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳ ಮೇಲೆ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು. ದಲಿತ ಹಿರಿಯ ಮುಖಂಡ ಕೆ. ಮದುವಣ್ಣನ್ ಅವರು ಮಾತನಾಡುತ್ತಾ, ದೇಶದಲ್ಲಿ ವಿದ್ಯಾವಂತ ನಿರುದ್ಯೋಗ ಸಮಸ್ಯೆ ಕಂಡು ಕೇಳಿರದಷ್ಟು ಹೆಚ್ಚಾಗಿದೆ. ರಾಜ್ಯದಲ್ಲೂ ವಿದ್ಯಾವಂತ ಯುವ ಜನತೆಗೆ ತಕ್ಕ ಉದ್ಯೋಗ ಸಿಗದೆ ಪರದಾಡುತ್ತಿರುವ ಸಮಯದಲ್ಲಿ ದಿನಬಳಕೆ ವಸ್ತುಗಳು ಸೇರಿದಂತೆ ಪೆಟ್ರೋಲ್ ಡೀಸೆಲ್ ಬೆಲೆ ಆಕಾಶದ ಎತ್ತರಕ್ಕೆ ಜಿಗಿದಿದೆ. ಇದರಿಂದ ಜನಸಾಮಾನ್ಯರ ಬದುಕು ಮೂರಾ ಬಟ್ಟೆಯಾಗಿದ್ದು, ಬಡವರ ಸಂಕಷ್ಟ ಗಣನೀಯವಾಗಿ ಹೆಚ್ಚಾಗಿದೆ.
ದಮನಿತರ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷರಾದ ನವೀನ್ ಕುಮಾರ್ ಅವರು ಮಾತನಾಡುತ್ತಾ, ಮೊದಲು ಸಂವಿಧಾನದ ಅರ್ಥವನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು.
ಹಾಗೂ ಸಂವಿಧಾನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ ಕರ್ತವ್ಯ ಎಂದು ಹೇಳಿದರು. ಸಂವಿಧಾನ ರಕ್ಷಣೆ ಮಾಡುವುದು ಯುವಕರ ಮೇಲೆ ಇದೆ ಯುವಕರು ಅರ್ಥ ಮಾಡಿಕೊಂಡು ಸಂವಿಧಾನವನ್ನು ಕಾಪಾಡಬೇಕೆಂದು ಸಲಹೆ ನೀಡಿದರು. ಬೆಂಗಳೂರು ಜಾಥಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಬೆಂಬಲ ನೀಡಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.