ಸಂವಿಧಾನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ನಿನ್ನೆ  ಸಂಜೆ ಸಂವಿಧಾನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾವಿನಹಳ್ಳಿಯ  ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್  ಹಾಗೂ ಸಂಜೀವರಾಯನಕೋಟೆಯ ರಂಗಕಹಳೆ ಸಾಂಸ್ಕೃತಿಕ ಸಂಘ  ಹಮ್ಮಿಕೊಂಡಿತ್ತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಮೇಲ್ವಿಚಾರಕ ಕೆ.ವಿರುಪಾಕ್ಷಪ್ಪ ಮಾತನಾಡಿ, ಸಂವಿಧಾನ ಎಂಬುದು ಯಾರು ಮರೆಯಲಾಗದ ಒಂದು ಅಸ್ತ್ರ ಈ ಅಸ್ತ್ರವನ್ನು ಸಮಯ ಸಂದರ್ಭಕ್ಕೆ ತಕ್ಕಂತೆ ನಾವು ಅದರ ಉಪಯೋಗಗಳನ್ನು ಪಡೆದುಕೊಳ್ಳಬೇಕೆಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ  ಶಿವಕುಮಾರ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಯೋಗ ಉಪನ್ಯಾಸಕ ಡಿ ಮಹೇಶ ಬಾಬು ಮಾತನಾಡಿ, ಸಂವಿಧಾನ ನಮಗೆ ಒಳ್ಳೆ ನಡೆ,ನುಡಿ, ನೀತಿ ನಿಯಮಗಳನ್ನು ನೀಡಿದೆ.  ಅದನ್ನು ಅರಿತುಕೊಂಡವರು ಸಮಾಜದಲ್ಲಿ ನಿರ್ಭಯವಾಗಿ ತಮ್ಮ ಸಾಧನೆಗೆ ಮುನ್ನಗ್ಗಬಹುದೆಂದರು.
ಅಧ್ಯಕ್ಷತೆವಹಿಸಿದ್ದ ಉಪ ತಹಶೀಲ್ದಾರ್  ರವಿಕುಮಾರ,
 ಸಂವಿಧಾನದಿಂದ ಜನರು ಹಲವಾರು ಉಪಯೋಗಗಳನ್ನು ಪಡೆದುಕೊಂಡಿದ್ದಾರೆಂದರು.
 ರಂಗಗೀತೆಗಳುನ್ನು ಬಿ.ದೊಡ್ಡಬಸಪ್ಪ ಮತ್ತು ತಂಡದವರು ಹಾಡಿದರೆ,
 ನಾನ್ಯಾರು ಎಂಬ ನಾಟಕವನ್ನು
 ಚಂದ್ರಶೇಖರ್ ಮತ್ತು ತಂಡದವರು ಪ್ರದರ್ಶಿಸಿದರು.
ಪ್ರಥಮ ದರ್ಜೆ ಸಹಾಯಕ ಮಹಾಂತೇಶ ಕಂದಾಯ ಇಲಾಖೆಯ ಕೆ ಮೌನೇಶ ಮತ್ತು ರಂಗ ನಿರ್ದೇಶಕ ಸೋಮಶೇಖರ್ ಕಾರಿಗನೂರು, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ನ ಕಾರ್ಯದರ್ಶಿ ಕುರುಬರ ಹೇಮೇಶ್ವರ,ರಂಗಕಹಳೆ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಕೆ ನಾಗರಾಜ,ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಯೋಗ ಉಪನ್ಯಾಸಕ ಡಿ.ಮಹೇಶ ಬಾಬು ಮೊದಲಾದವರು ಇದ್ದರು.

One attachment • Scanned by Gmail