ಸಂವಿಧಾನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ : ಶಾಸಕ ಭೂಸನೂರ

ಆಲಮೇಲ:ಮಾ.24:ಕೇಂದ್ರ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಆಡಳಿತದ ಚುಕ್ಕಾಣಿ ಹಿಡಿದರೂ ಕೂಡಾ ಡಾ/ಅಂಬೇಡ್ಕರರು ನಮ್ಮಗೆ ಕೊಟ್ಟಿರುವ ಪ್ರಜಾಪ್ರಭುತ್ವವದ ವ್ಯವಸ್ಥೆ ಹಾಗೂ ಪವಿತ್ರ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವೇ ಇಲ್ಲಾ ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದರು.
ಆಲಮೇಲ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಚಾಲನಾ ಸಮಿತಿ ಸಿಂದಗಿ ಹಾಗೂ ಗ್ರಾಮ ಶಾಖೆ ಹೂವಿನಹಳ್ಳಿಯಲ್ಲಿ ಗುರುವಾರ ಡಾ/ಅಂಬೇಡ್ಕರರ ಪ್ರತಿಮೆ ಅನಾವರಣಗೊಳ್ಳಿಸಿ ಮಾತನಾಡಿದ ಅವರು
ಹಿಂದಿನ ಇತಿಹಾಸವನ್ನು ತಗೆದು ನೋಡಿದರೇ ಆಗಿನ ಸರ್ಕಾರಗಳು ಅಂಬೇಡ್ಕರರ ಜೀವಿತಾವಧಿ ಹಾಗೂ ಅವರ ಮರಣದ ಸಂದರ್ಭದಲ್ಲಿ ನಡೆದುಕೊಂಡು ಬಂದ ರೀತಿಗಳು ಇಂದಿನ ಯುವ ಪಿಳಿಗೆಗಳು ಗಮನಿಸಬೇಕಾದ ಅವಶಕತೆ ಇದೇ.ಎಲ್ಲಿಯ ವರೆಗೆ ಈ ದೇಶದಲ್ಲಿ ಅಸ್ಪøಶ್ಯತೆ ಇರುತ್ತದೆಯೋ ಅಲ್ಲಿಯ ವರೆಗೆ ಮಿಸಲಾತಿ ಇರುತ್ತದೆ.ಅದಕ್ಕಾಗಿ ಡಾ/ಅಂಬೇಡ್ಕರರು ಹೆಳಿದ ಹಾಗೆ ದಲಿತರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನಿಡಿ.ಶಿಕ್ಷಣವಂತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ದಸಂಸ ಮುಖಂಡ ರಮೇಶ ಆಸಂಗಿ ಪ್ರಾಸ್ತಾವಿಕ ಮಾತನಾಡಿ ಡಾ/ಅಂಬೇಡ್ಕರರು ಈ ದೇಶಕ್ಕೆ ಕೊಟ್ಟಿರುವ ಪವಿತ್ರವಾದ ಸಂವಿಧಾನಕ್ಕೆ ಧಕ್ಕೆಯಾದರೇ ಭಾರತವೂ ಕೂಡಾ ಒಂದು ದೇಶವಾಗಿ ಉಳಿಯುವದಿಲ್ಲಾ. ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಸಂವಿಧಾನದ ಕುರಿತು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಯಾರೇ ಸಂವಿಧಾನದ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಿದರೇ ದಸಂಸ ಸಹಿಸುವದಿಲ್ಲಾ ಎಂದು ಎಚ್ಚರಿಕೆ ನಿಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿಂದಗಿ ಬುದ್ಧ ವಿಹಾರದ ಪೂಜ್ಯ ಸಂಘಪಾಲ ಬಂತೇಜಿ,ಸಾನಿಧ್ಯ ಆಸಂಗಿಹಾಳ ಮಠದ ಪೂಜ್ಯ ಶಂಕರಾನಂದ ಮಹಾರಾಜರು ವಹಿಸಿದರು.
ಜೆಡಿಎಸ್ ಅಭ್ಯರ್ಥಿ ಶ್ರೀಮತಿ ವಿಶಾಲಕ್ಷಿ ಪಾಟೀಲ,ಮಾಜಿ ಜಿಪಂ ಉಪಾಧ್ಯಕ್ಷ ಸಿದ್ಧರಾಮ ಪಾಟೀಲ.ಮಾಜಿ ಜಿಪಂ ಸದಸ್ಯ ಶರಣಪ್ಪ ಕಣ್ಮೇಶ್ವರ, ಅಹಿಂದ ಮುಖಂಡ ಎಸ್.ಎಮ್.ಪಾಟೀಲ ಗಣಿಹಾರ, ಪರಸುರಾಮ ಕಾಂಬಳೆ.ಚನ್ನು ವಾರದ, ಗ್ರಾಪಂ ಅಧ್ಯಕ್ಷೆ ನಿಲ್ಲಮ್ಮಾ ಬಿರಾದಾರ, ಉಪಾಧ್ಯಕ್ಷೆ ಲಕ್ಷ್ಮೀ ಶರಣು ಸಿಂಧೆ. ದಸಂಸ ಜಿಲ್ಲಾ ಸಂಚಾಲಕರಾದ ಚಂದ್ರಕಾಂತ ಸಿಂಗೆ, ಶರಣು ಸಿಂಧೆ.ತಾಲೂಕ ಸಂಚಾಲಕ ಮಂಜುನಾಥ ಯಂಟಮಾನ.ಜಗದೀಶ ಸಿಂಗೆ.ಪಂಡೀತ ಅವಜಿ ಹಾಗೂ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.