ಸಂವಿಧಾನ ಬರೆದು ದೇಶದ ಹಣೆಬರಹ ಬದಲಾಯಿಸಿದರು ಅಂಬೇಡ್ಕರಃ ಹಾಸಿಂಪೀರ

ವಿಜಯಪುರ, ಡಿ.7-ಭಾರತದ ಸಂವಿಧಾನ ಶಿಲ್ಪಿ ಡಾ: ಬಿ ಆರ್ ಅಂಬೇಡ್ಕರ್ ಅವರು ಡಿಸೆಂಬರ್ 6 ರಂದು ನಿಧನ ಹೊಂದಿದ ದಿನವನ್ನು ಮಹಾಪರಿನಿರ್ವಾನ ದಿವಸವೆಂದು ಆಚರಿಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಆಶ್ರಯದಲ್ಲಿ ಮಹಾಪರಿನಿರ್ವಾನ ದಿವಸ ಶ್ರೀ ಸಿದ್ಧೇಶ್ವರ ದೇವರು ಸ್ಥಾನದ ಆವರಣದಲ್ಲಿ ಆಚರಣೆ ಮಾಡಲಾಯಿತು. ಬೌದ್ಧ ಧರ್ಮದಲ್ಲಿ ಪರಿನಿರ್ವಾನ ಎಂದರೆ ತೀರಿಹೋದ ನಂತರ ನಿರ್ಮಾನವಾಗುವದು. ಡಾ ಅಂಬೇಡ್ಕರ್ ಅವರು ಖ್ಯಾತ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಮತ್ತು ಸಾಮಾಜಿಕ ಸುಧಾರಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲಿ ಬೌದ್ಧ, ದಲಿತ ಚಳುವಳಿಗಳು, ಮಹಿಳೆ ಯಲ್ಲಿರುವ,ಕಾರ್ಮಿಕರ ಹಕ್ಕುಗಳನ್ನು ಸಂವಿಧಾನದ ಮೂಲಕ ಈ ದೇಶದ ಹಣೆಬರಹ ಬರೆದರು ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆ. ಸುವಿದಾ ಸಮಾಜಿಕ ಸಂಸ್ಥೆ ಅಧ್ಯಕ್ಷ ಫಯಾಜ ಕಲಾದಗಿ, ನಿವೃತ್ತ ಅಧಿಕಾರಿ ವಿಠೋಬಾ ಅರ್ಜುನಗಿ ಹುಸೇನ ಬಾಗಾಯತ ಮಾತನಾಡಿದರು
ನಿವೃತ್ತ ಎಎಸ್‍ಆಯ್ ಇದ್ರೂಸ್ ಪಠಾಣ ಬಂದೇನವಾಜ ಬೀಳಗಿ, ಎಸ್‍ಬಿ ಪಾಟೀಲ್, ಬಿ.ಕೆ ಬಸವರಾಜ. ಹಾಪೀಜ ವಾಲಿಕಾರ, ಗಿರೀಶ್ ಕುಲಕರ್ಣಿ ಸಲೀಮ ಬೀಳಗಿ ಮಹಮ್ಮದ ವಾಲಿಕಾರ, ಸುನೀಲ ಹಳ್ಳಿ ಮುಂತಾದವರು ಭಾಗವಹಿಸಿದ್ದರು.