ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಕೋಮುವಾದಿ ಬಿಜೆಪಿ ಧಿಕ್ಕರಿಸಲು ಡಿ.ಜಿ. ಸಾಗರ ಕರೆ

ವಿಜಯಪುರ,ಏ.23:ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಕೋಮುವಾದಿ ಪಕ್ಷಗಳನ್ನು ಧಿಕ್ಕರಿಸಿ ಜನಪರ ಚಿಂತನೆಯ ಪಕ್ಷವನ್ನು ಬೆಂಬಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಾ. ಡಿ.ಜಿ. ಸಾಗರ ಕರೆ ನೀಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024 ಲೋಕಸಭಾ ಚುನಾವಣೆ ಒಂದು ಐತಿಹಾಸಿಕ ಕವಲು ದಾರಿಗೆ ಭಾರತೀಯರನ್ನು ನಿಲ್ಲಿಸಿದೆ. ಕೇವಲ ಹಿಡಿಯಷ್ಟಿರುವ ಆರ್.ಎಸ್.ಎಸ್ಸಿಗರು ಮಾಧ್ಯಮ, ನ್ಯಾಯಾಂಗ, ಕಾರ್ಯಾಂಗ ಆಕ್ರಮಿಸಿಕೊಂಡು 140 ಕೋಟಿ ಭಾರತೀಯರನ್ನು ತಮ್ಮ ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರವರು ರಚಿಸಿದ ಭಾರತದ ಸಂವಿಧಾನ ಬದಲಾಯಿಸಿ ‘ಮನುವಾದಿ ಸಂವಿಧಾನ’ ಜಾರಿ ಮಾಡಿ ಇಡೀ ವ್ಯವಸ್ಥೆಯನ್ನು ತಮ್ಮ ಕಪಿಮುಷ್ಠಿಯಲ್ಲಿರುವಂತೆ ನೋಡಿಕೊಳ್ಳುವ ಹುನ್ನಾರದ ಬಲೆ ಬೀಸಿದ್ದಾರೆ. ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್‍ರವರಿಗೆ ಸಂವಿಧಾನ ರಚಿಸಲು ಐತಿಹಾಸಿಕ ಅವಕಾಶ ಬಂದು ‘ಸಮ ಸಮಾಜ ತರಲು ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ವ್ಯವಸ್ಥೆ ನಿರ್ಮಾಣ ಮಾಡಲು ಭಾರತ ಸಂವಿಧಾನ ರಚಿಸಿ ಜಾರಿಗೊಳಿಸಿದರು. ಭಾರತ ಸಂವಿಧಾನದಿಂದ ಭಾರತೀಯರೆಲ್ಲರೂ ವಿಶೇಷವಾಗಿ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಹಾಗೂ ಕೃಷಿ ಕಾರ್ಮಿಕರು ತಲೆ ಎತ್ತಿ ನಿಲ್ಲುವ ಸಮಯದಲ್ಲಿಯೇ ಮನುವಾದಿ ಆರ್.ಎಸ್.ಎಸ್. ಮುಖವಾಣಿಯಾದ ಬಿ.ಜೆ.ಪಿ. ರಾಜ್ಯಾಧಿಕಾರದ ಮುಖಾಂತರ ಈ ಎಲ್ಲಾ ಭಾರತೀಯರ ಬದುಕಿಗೆ ಕಂಟಕವಾಗಿ ನಿಂತಿದೆ. ಭಾರತವನ್ನು, ಭಾರತೀಯತೆಯನ್ನು ಭಾರತ ಸಂವಿಧಾನ, ಪ್ರಜಾಪ್ರಭುತ್ವವನ್ನು ಹೀನಾಯದಂಚಿಗೆ ತಂದು ನಿಲ್ಲಿಸಿದೆ. ಆದ್ದರಿಂದ 2024 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತ ಏ.26 ರಂದು ಮತ್ತು ಎರಡನೆ ಹಂತ ಏ.7 ರಂದು ಎರಡು ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಭ್ರಷ್ಟ ಬಿ.ಜೆ.ಪಿ.ಗೆ ಮತವನ್ನು ನೀಡದೆ ತಿರಸ್ಕರಿಸಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ, ದುರ್ಬಲ ವರ್ಗಗಳ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಹಿತ ಕಾಪಾಡುವ ವಿಶೇಷವಾಗಿ ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುವುದರ ಮುಖಾಂತರ ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದೆಂದು ಮತ್ತು ಪ್ರತಿ ಬಡ ಕುಟುಂಬಗಳು ಆರ್ಥಿಕದಿಂದ ಸದೃಢತೆ ಮಾಡಲು ಪಣ ತೊಟ್ಟು ಜಾರಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕರ್ನಾಟಕ ಸರಕಾರದ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯೆನಿಸಿದೆ. ಕಳೆದ ವರ್ಷ 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಯನ್ನು ಕೆಟ್ಟ ರೀತಿಯಲ್ಲಿ ಸೋತಿರುವುದು-ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮತ್ತು ದೇಶದ ಜನರ ಬಗ್ಗೆ ಕಾಳಜಿ ಇರುವವರೆಲ್ಲರಿಗೂ ಒಂದು ಹೊಸ ಉತ್ಸಾಹ ಹಾಗೂ ಭರವಸೆ ಹುಟ್ಟಿಸಿದೆ. ಲೋಕಸಭೆಯಲ್ಲಿರುವ ಬಹುಮತವನ್ನೇ ಬಳಸಿಕೊಂಡು ನಿರುಂಕುಶ ಸರ್ವಾಧಿಕಾರದತ್ತ ಸಾಗಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಸಂವಿಧಾನಿಕ ಸಂಸ್ಥೆಗಳಾದ ಐ.ಟಿ, ಇ.ಡಿ. ಸಿ.ಬಿ.ಐ. ಮತ್ತು ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸಿ ಅವುಗಳ ಸ್ವಾಯತತ್ತೆಯನ್ನು ನಿರರ್ಥಕಗೊಳಿಸಿ ಅವುಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಒಂದು ದೇಶ, ಒಂದು ಚುನಾವಣೆ, ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ ಬಿ.ಜೆ.ಪಿ.ಯ ಹಿರಿಯ ಮುಖಂಡ ಅಡ್ವಾನಿ ಪ್ರಾರಂಭ ಮಾಡಿದ್ದರು. “ಒಂದು ದೇಶ, ಒಂದು ಚುನಾವಣೆ ಎನ್ನುವ ಸಂಘಗಳನ್ನು 2014ರ ಚುನಾವಣೆಯ ನಂತರ ಪ್ರಧಾನಿ ಮೋದಿ ಮುಂದುವರೆಸಿಕೊಂಡು ಬಂದಿದ್ದರು. ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸಿ ಸಂಪೂರ್ಣ ಕೇಂದ್ರೀಕರಣಗೊಳಿಸಲ್ಪಟ್ಟ ವ್ಯವಸ್ಥೆಯನ್ನು ಜಾರಿ ಮಾಡಲು ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರುಳ್ಳ ಸಮಿತಿ ನೀಡಿದ ವರದಿ ಆಧಾರದ ಮೇಲೆ ದೇಶದಲ್ಲಿ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ ತೆಗೆದುಕೊಂಡು ಹೋಗುವ ಹುನ್ನಾರ ಇದರಲ್ಲಡಗಿದೆ ಎಂದರು.
ಮೋದಿ ಸರ್ಕಾರದಲ್ಲಿ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟಿದೆ. ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. ಪ್ರತಿ ದಿನ 14 ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ 4 ಅತ್ಯಾಚಾರಗಳು ದಲಿತ ಬಾಲಕಿಯರ ಮೇಲೆ ನಡೆಯುತ್ತಿದೆ. ಪ್ರತಿ ದಿನ 93 ದಲಿತರನ್ನು ಕೊಲ್ಲಲಾಗುತ್ತಿದೆ. ಇನ್ನು ಥಳಿತ, ಕೊಲೆಗೆ ಯತ್ನ, ಅವಮಾನ ಜಾತಿನಿಂದನೆ, ಬಹಿμÁ್ಕರಗಳ ಲೆಕ್ಕವೇ ಇಲ್ಲ. ಇವಿಷ್ಟು ದಾಖಲಾಗಿರುವ ಪ್ರಕರಣಗಳ ಹಣೆಬರಹ, ದಾಖಲಾಗದ ಪ್ರಕರಣಗಳು ರಾಶಿಗಟ್ಟಲೇ ಅಲ್ಲಲ್ಲಿಯೇ ಉಸಿರಾಟ ನಿಲ್ಲಿಸಿ ಸಾಯುತ್ತಿವೆ. ಹೀಗೆ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತವು ದಲಿತರಿಗೆ ನರಕವನ್ನೇ ತೋರಿಸುತ್ತಿರುವಾಗ ಪೆÇೀಲಿಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಸಿಗಲು ಸಾಧ್ಯವೇ ಇಲ್ಲ. ದÀಲಿತರಿಗೆ ನ್ಯಾಯ ಕೊಡಿಸಲು ವಿಫಲವಾಗಿರುವ ಮೋದಿ ಸರ್ಕಾರ ಶೇ.96 ರಷ್ಟು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡು ಗಹಗಹಿಸಿ ನಗುತ್ತಿದೆ. ಹಿಂದೂ ರಾಷ್ಟ್ರದ ಲಕ್ಷಣಗಳನ್ನು ತೋರಿಸುತ್ತಿದೆ. ಇಂಥ ದಲಿತ ವಿರೋಧಿ ಬಿ.ಜೆ.ಪಿ.ಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು.
ಹಿಂದಿನ ರಾಜ್ಯ ಬಿ.ಜೆ.ಪಿ. ಸರ್ಕಾರ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಳ ಮೀಸಲಾತಿ ವರ್ಗಿಕರಣ ಮಾಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ನಿಜವಾದರೆ ಕೇಂದ್ರ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲಿಲ್ಲಾ ಏಕೆ? ಇದು ಕೇವಲ ಬಿ.ಜೆ.ಪಿ. ಚುನಾವಣೆ ತಂತ್ರವಾಗಿದೆ. ರಾಜ್ಯಕ್ಕೆ ತೆರಿಗೆಯಲ್ಲಿ ಕೂಡಾ ಅನ್ಯಾಯ, ಬರಗಾಲವಿದ್ದರೂ ಬರ ಪರಿಹಾರ ಕೊಡುತ್ತಿಲ್ಲಾ, ಮೀಸಲಾತಿಯಲ್ಲಿಯೂ ಅನ್ಯಾಯ ಮಾಡುತ್ತಿದೆ. ಇಡೀ ಮೀಸಲಾತಿಯನ್ನೇ ರದ್ದು ಮಾಡಲು ತಯಾರಿ ನಡೆಸಲಾಗಿದೆ. 2014 ರಲ್ಲಿ ಪ್ರತಿ ವರ್ಷ 2 ಕೋಟಿ ಹುದ್ದೆಗಳನ್ನು ಸೃಷ್ಟಿಸಿ ಯುವಕರಿಗೆ ನೀಡುವುದಾಗಿ ಹೇಳಿ ಹತ್ತು ವರ್ಷಗಳಾಯಿತು ಏನು ಮಾಡಲಿಲ್ಲ. ಪÉಟ್ರೋಲ್, ಡಿಜೇಲ್ 35 ರೂಪಾಯಿ ನೀಡಲು ಹೇಳಲಾಗಿತ್ತು. ಅದು ಆಗಲಿಲ್ಲ. ಅಡುಗೆ ಅನಿಲ ಬೆಲೆ ಆಗ್ಗ ಮಾಡುವುದಾಗಿ ಹೇಳಲಾಗಿತ್ತು. ಅದೂ ಈಡೇರಿಲ್ಲ. ಮೋದಿಯವರ ಸರಕಾರ ಕೊನೆ ಮೊದಲಿಲ್ಲದ ಸುಳ್ಳುಗಳನ್ನು ಹೇಳಿದೆ. ಈ ಮೇಲಿನ ಸುಳ್ಳು ಹೇಳಿಕೆಯಿಂದ ಕೇಂದ್ರ ಸರ್ಕಾರದ ಭಾರತೀಯ ಜನತಾ ಪಕ್ಷವನ್ನೇ ದುರ್ಬಲಗೊಳಿಸಿದೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಲು, ಸಂವಿಧಾನದ ಆಶಯ ಜಾರಿ ಮಾಡಲು ಈ ಬಾರಿ 2024 ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳನ್ನು ಅಧಿಕಾರದಿಂದ ದೂರ ಇಡಬೇಕು. ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ರಾಜ್ಯದ ಎಲ್ಲಾ ಮತದಾರರು ಬೆಂಬಲಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿನಂತಿಸಿಕೊಳ್ಳುತ್ತದೆ ಎಂದು ಹೇಳಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕÀ ಸಿದ್ದು ರಾಯಣ್ಣವರ, ವಿದ್ಯಾರ್ಥಿ ಪರಿಷತ್À ಸಂಚಾಲಕÀ ವಾಯ್.ಸಿ. ಮಯೂರ, ಎಸ್.ಪಿ. ಸುಳ್ಳದ, ರಮೇಶ ಧರಣಾಕರ ಮತ್ತಿತರು ಉಪಸ್ಥಿತರಿದ್ದರು.