ಸಂವಿಧಾನ ಪರಿಚ್ಛೇದ ೩೪೧ ಜಾರಿಗೆ ನಿರ್ಲಕ್ಷ ಖಂಡಿಸಿ ಪ್ರತಿಭಟನೆ

ರಾಯಚೂರು, ಆ.೦೮- ಸಂವಿಧಾನ ಪರಿಚ್ಛೇದ ೩೪೧ ಜಾರಿಗೆ ನಿರ್ಲಕ್ಷ ದೋರಣೆ ಮುಂದುವರಿಸುತ್ತಿರುವ ಕೇಂದ್ರ ಬಿಜೆಪಿ ಸರಕಾರ ವಿರುದ್ಧ ಒಳ ಮೀಸಲಾತಿ ಹೋರಾಟ ಸಮತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದ ಪರಿಶಿಷ್ಟ ಮತ್ತು ಪರಿಶಿಷ್ಠ ಪಂಗಡಗಳ ಶೇ. ೧೭-೭ ಮೀಸಲಾತಿಯನ್ನು ೯ನೇ ಶೇಡ್ಯೂಲ್‌ಗೆ ಸೇರಿಸಲು ಮತ್ತು ಪರಿಶಿಷ್ಠ ಜಾತಿ ಶೇ. ೧೭ ಮೀಸಲಾತಿಗೆ ಸಂವಿಧಾನ ಪರಿಚ್ಛೇದ
ಎರಡು ಬಿಲ್‌ಗಳನ್ನು ಸಂಸತ್ತಿನ ಮುಂಗಾರು ಅಧಿವೇಶದನಲ್ಲಿ ತಿದ್ದುಪಡಿಗಾಗಿ ಮಂಡಿಸುವಂತೆ ಕೇಂದ್ರಕ್ಕೆ ಒತ್ತಾಯಿಸಿದರು. ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಕ್ರಮ ತೆಗೆದುಕೊಂಡು, ನಿವೃತ್ತ ನ್ಯಾ. ಹೆಚ್.ಎನ್.ನಾಗಮೋಹನ್‌ದಾಸ್ ರವರ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಗಳ ಮೀಸಲಾತಿ ಶೇ. ೧೫ ರಿಂದ ೧೭ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. ೩ ರಿಂದ ೭ಕ್ಕೆ ಹೆಚ್ಚಳ ಮಾಡಿ, ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ನ್ಯಾ.ನಾಗಮೋಹನ್‌ದಾಸ್ ಸಮಿತಿಯು ಪರಿಶಿಷ್ಟಜಾತಿ ಮತ್ತು ಪರಿಶಿಷ್ಠ ಪಂಗಡಗಳಲ್ಲಿ ಒಳಮೀಸಲಾತಿಗೆ ಶಿಫಾರಸ್ಸು ಮಾಡಿದ್ದನ್ನು, ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ ಎಂಬುವುದೇ ಒಂದು ವಿಪರ್ಯಾಸವಾಗಿದೆ. ಈ ಹೆಚ್ಚಳದ ಮೀಸಲಾತಿಯು ಸುಪ್ರೀಮ್ ಕೋರ್ಟಿನ ಶೇ. ೫೦% ಮೀಸಲಾತಿಯ ಮಿತಿಯನ್ನು ಮೀರುವುದರಿಂದ ಈ ಹೆಚ್ಚಳದ ಮೀಸಲಾತಿಗೆ ತಿದ್ದುಪಡಿ ತಂದು ಸಂವಿಧಾನದ ೯ನೇ ಶೇಡ್ಯೂಲ್‌ಗೆ ಸೇರಿಸಲು ಈಗಾಗಲೇ ಹಿಂದಿನ ರಾಜ್ಯ ಬಿಜೆಪಿ ಸರಕಾರ ಕೇಂದ್ರಕ್ಕೆ ಶಿಪ್ಪಾರಸ್ಸು ಮಾಡಿದೆ. ಕೇಂದ್ರ ಬಿಜೆಪಿ ಸರಕಾರ ಈ ಶಿಪ್ಪಾರಸ್ಸನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಿ ತಿದ್ದುಪಡಿಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ ಮಾರೆಪ್ಪ ವಕೀಲರು, ಹೇಮರಾಜ ಆಸ್ಕಿಹಾಳ, ರಾಘವೇಂದ್ರ ಬೋರೆಡ್ಡಿ, ಎ ರಾಮು, ಸೇರಿದಂತೆ ಉಪಸ್ಥಿತರಿದ್ದರು.