ಸಂವಿಧಾನ ದೇಶದ ಪವಿತ್ರ ಗ್ರಂಥ: ಹಣಮಂತ ಅರವತ್ತು

ಇಂಡಿ:ಫೆ.7: ತಾಲೂಕಿನ ಹಿರೇಬೇವನೂರ  ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತ ಜಾಥಾದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು, ಯುವಕರು ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತ ಜಾಥಾ ಸ್ಥಬ್ದಚಿತ್ರವನ್ನು ಪುಷ್ಪನಮನದೊಂದಿಗೆ ಸಲ್ಲಿಸಿ ಬಳಿಕ ಮುಖ್ಯ ರಸ್ತೆಯಿಂದ ಅಂಬೇಡ್ಕರ ವೃತ್ತದವರೆಗೆ  ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂಧರ್ಬದಲ್ಲಿ ನಿಲಯ ಮೇಲ್ವೀಚಾರಕ ಹಣಮಂತ ಅರವತ್ತು ಮಾತನಾಡಿ ಭಾರತದ ಸಂವಿಧಾನ ವಿಶ್ವದಲ್ಲಿಯೇ ಬಲಾಢ್ಯ ಪ್ರಜಾಪ್ರಭುತ್ವ ಜಾತ್ಯಾತೀತ ಸಂವಿಧಾನವಾಗಿದ್ದು ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವ ಸಿದ್ದಾಂತದ ಮೇಲೆ ರಚನೆಯಾಗಿದೆ. ಸಂವಿಧಾನ ಎಂಬುದು ಭಾರತ ದೇಶದ ಪವಿತ್ರ ಗ್ರಂಥವಾಗಿದ್ದು ದೇಶ ಆಳುವ ಸರಕಾರದ ಮೂಲ ರಚನೆ ಖಚಿತಪಡಿಸುತ್ತದೆ. ಅದು ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ಸರಕಾರದ ಮೂರು ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನ ಪ್ರತಿ ಅಂಗದ ಅಧಿಕಾರ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಪಡಿಸುತ್ತದೆ.ದೇಶದಲ್ಲಿ ತುಳಿತಕ್ಕೊಳಗಾದವರ ಶೋಷಿತರಿಗೆ ರಕ್ಷಣೆ ನೀಡುತ್ತಿರುವುದು ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನ. ನಮ್ಮ ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಕಟಿಬದ್ದರಾಗಿ ನಿಲ್ಲೋಣ. ಅಂಬೇಡ್ಕರವರು ದೇಶಕ್ಕೆ ಅವಶ್ಯಕ ಮತ್ತು ಅದ್ಬುತವಾದ ಸಂವಿಧಾನ ರಚಿಸಿಕೊಟ್ಟಿದರಿಂದ ಎಲ್ಲರ ಬದುಕು ಹಸನಾಗಿ ನೆಮ್ಮದಿಯ ಜೀವನ ನಡೆಸುವಂತಗಿದೆ.ಸಂವಿಧಾನದ ಮೀಸಲಾತಿ ಕೇವಲ ದಲಿತರಿಗೆ ಅಷ್ಠೇ ಅಲ್ಲ ಇಡೀ ದೇಶದ ಪ್ರತಿಯೋಬ್ಬ ನಾಗರೀಕರಿಗೆ ನೀಡಲಾಗಿದೆ ಎಂದರು.

ಸಂವಿಧಾನ ಒಂದು ಆಚರಣೆ ಮಾಡಿ ಸೀಮಿತ ಮಾಡದೇ ತಮ್ಮ ಮನೆ ಮನೆಗಳಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದರು. ಸಂವಿಧಾನ ಮೌಲ್ಯಗಳನ್ನು ಜೀವಂತವಾಗಿರಬೇಕೆಂಬ ಉದ್ದೇಶದಿಂದ ಜಾಗೃತ ಜಾಥಾ ಹಮ್ಮಿಕೊಳ್ಳಲಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಮಾತನ್ನು ಆಡದ ಸ್ಥಿತಿಯಲ್ಲಿದ್ದವರಿಗೆ ಸಂವಿಧಾನದ ಮೂಲಕ ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ನೀಡಿ ಸಮಾನಾಗಿ ಬದುಕುವ ಅವಕಾಶ ಕಲ್ಪಸಿಕೊಟ್ಟಿದೆ. ಆದ್ದರಿಂದ ನಮ್ಮೆಲ್ಲ ಮಹಿಳಾ ಬಂಧುಗಳು ಸಂವಿಧಾನ ಮೌಲ್ಯಗಳನ್ನು ಮರೆಯಬಾರದು ಎಂದು ರವಿ ನಾರಾಯಣಪೂರ ಹೇಳಿದರು.

ಕಾರ್ಯಕ್ರಮದಲ್ಲಿ ಸಂವಿಧಾನ ಜಾಗೃತ ಜಾಥಾದಲ್ಲಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಜಾಧವ, ಆರ್.ಡಿ ಪಾಟೀಲ, ಭೀಮರಾಯಗೌಡ ಬಿರಾದಾರ, ಸಂತೋಷ ಬಿರಾದಾರ, ರಾಜಶೇಖರ ಪಾತಾಳಿ, ಸಾಯಬಗೌಡ ಬಿರಾದಾರ, ಸಿದ್ದರಾಮ ಹಂಜಗಿ, ಮಂಜುನಾಥ ಪಾತಾಳಿ, ಪರಶುರಾಮ ಶಿವಶರಣ, ರಾಜು ಪಡನೂರ, ಸಚೀನ ಸಿಂಧೆ, ಶ್ರೀನಾಥ ಸಿಂಧೆ, ಅಭಿವೃದ್ದಿ ಅಧಿಕಾರಿ ರವಿ ಕರ್ಜಗಿ, ಪುಂಡಲಿಕ ಶಿವಶರಣ ಹಿರೇಬೇವನೂರ ಗ್ರಾಮದ ಎಲ್ಲಾ ಶಾಲಾ ಶಿಕ್ಷಕರು ,ಮುಖ್ಯ ಗುರುಗಳು, ಗ್ರಾಮ ಪಂಚಾಯತ ಅಧ್ಯಕ್ಷರು ಸರ್ವಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಗ್ರಾಮದ ಮುಖಂಡರು ಸೇರಿದಂತೆ ಅನೇಕ ಮಹಿಳೆಯರು ಸಂವಿಧಾನ ಪೀಠಿಕೆ ಮೇರವಣಿಗೆಯಲ್ಲಿದ್ದರು.