ಸಂವಿಧಾನ ಜೀವನ ಚೈತನ್ಯವಾಗಿದೆ: ಮಂಜುನಾಥ್

ಸಂಜೆವಾಣಿ ವಾರ್ತೆ
ಹನೂರು ಜ 27 :- ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನ ಜೀವನದ ಚೈತನ್ಯವಾಗಿದೆ ಸಂವಿಧಾನದ ರಕ್ಷಣೆ ಮಾಡುವದು ನಮ್ಮೆಲರ ಜವಾಬ್ದಾರಿ ಯಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಅವರು ತಿಳಿಸಿದರು.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 75ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರ್ಥ ಪೂರ್ಣವಾದ ಸಂವಿಧಾನವನ್ನು ನಮಗೆ ಕೊಡುಗೆ ಯಾಗಿ ನೀಡಿದ್ದಾರೆ ನಿಜಕ್ಕೂ ನಾವು ಹೆಮ್ಮೆ ಪಡುವ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಹ ಸಂವಿಧಾನದ ಮಹತ್ವವನ್ನು ಅರಿತು ಕೊಳ್ಳಬೇಕಾಗಿದೆ.
ಇಂದು 75ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಸ್ವಾತಂತ್ರ ಹೋರಾಟಗಾರರ , ತ್ಯಾಗ ಬಲಿದಾನ ಗಳನ್ನು ಸ್ಮರಿಸುವ ದಿನವಾಗಿದೆ ಯುವ ನಾಗರಿಕರು ದೇಶದ ಭವಿಷ್ಯವನ್ನು ಕಟ್ಟುವ ಕೆಲಸವಾಗಬೇಕು.
ಈ ದೆಸೆಯಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ, ಜಾತಿ ಧರ್ಮ, ಜನಾಂಗವನ್ನು ಬದಿಗಿಟ್ಟು ಎಲ್ಲರೂ ಒಂದೇ ಎನ್ನುವ ಭಾವನೆ ಯನ್ನು ಮೂಡಿಸಬೇಕು. ನಮ್ಮ ದೇಶ ವೈವಿದ್ಯತೆ, ಏಕತೆಯನ್ನು ಹೊಂದಿದೆ. ಅಭಿವೃದ್ಧಿ ಹೊಂದಲು ರಾಷ್ಟ ನಿರ್ಮಿಸುವ ನಿಟ್ಟಿನಲ್ಲಿ, ದೇಶಕೋಸ್ಕರ ಹಲವು ಮಹನೀಯರ ಕೊಡುಗೆ ಇದೆ ಎಂದು ತಿಳಿಸಿದರು.
ಗಣರಾಜ್ಯೋತ್ಸವ ಆಚರಣೆ ಧ್ವಜಾರೋಹಣವನ್ನು ತಾಲೂಕು ತಹಸಿಲ್ದಾರ್ ಗುರುಪ್ರಸಾದ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳಿಂದ ಪಥ ಸಂಚಲನ ಕಾರ್ಯಕ್ರಮ ಗಮನ ಸೆಳೆಯಿತು. ಹಾಗೂ ಶಾಲೆಯ ಮಕ್ಕಳು ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸೈನಿಕ ಸೇವೆಯಲ್ಲಿ ಸೌರ್ಯ ಚಕ್ರ ಪ್ರಶಸ್ತಿ ಪಡೆದು ನಿವೃತ್ತಿ ಯಾಗಿರುವ ಸೈನಿಕರಾದ ಲೂಯಿಸ್ ಪೆರಿಯನಾಯಗಮ್ ಹಾಗೂ ಮಾಜಿ ಸೈನಿಕ ಗಂಗಾಧರ್ ಅವರನ್ನು ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಇಒ ಶಿವರಾಜು, ತಾಲ್ಲೂಕು ಪಂ. ಇಓ ಉಮೇಶ್, ಗ್ರೇಡ್ 2 ತಹಶೀಲ್ದಾರ್ ಡಾII ಧನಂಜಯ, ಪಟ್ಟಣ ಪಂ. ಸದಸ್ಯರಾದ ಮಹೇಶ್, ಸಂಪತ್ ಕುಮಾರ್, ಸೋಮಶೇಖರ್, ಪವಿತ್ರ, ಆನಂದ್ ಕುಮಾರ್, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಮಹಿಳಾ ಮತ್ತು ಮಕ್ಕಳ ಇಲಾಖೆ ನಂಜಮಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.