ಸಂವಿಧಾನ ಜಾರಿ ದಿನ ಆಚರಣೆಗೆ ಸಮಿತಿ ರಚನೆ

ಬೀದರ:ಜ.12:ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಸಂವಿಧಾನ ಸಂರಕ್ಷಣಾ ಸಮಿತಿ, ಆಶ್ರಯದಲ್ಲಿ ಇಂದು ಬೀದರ ನಗರದ ಅಂಬೇಡ್ಕರ ವೃತ್ತದಲ್ಲಿರುವ ಅತಿಥಿ ಗೃಹದಲ್ಲಿ ಜನೆವರಿ 26 ರಂದು ಸಂವಿಧಾನ ಜಾರಿಯಾದ ದಿನದ ಅಂಗವಾಗಿ ಸಭೆಯನ್ನು ನಡೆಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಬಾಬುರಾವ ಪಾಸ್ವಾನ್ ಅವರು ವಹಿಸಿದರು, ಈ ಸಭೆಯಲ್ಲಿ ಅನೇಕ ದಲಿತ ಸಂಘಟನೆಗಳ ಒಕ್ಕೂಟದ ಸಮ್ಮುಖದಲ್ಲಿ ಜನೆವರಿ 26, ಸಂವಿಧಾನ ಜಾರಿಯಾದ ದಿನದ ಅಂಗವಾಗಿ ಸಮಿತಿ ರಚನೆ ಮಾಡಿ, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಭಾಷಣಕಾರರನ್ನು ಕರೆತರಲು ನಿರ್ಧರಿಸಿ, ಈ ಸಭೆಯಲ್ಲಿ ಎಲ್ಲರ ಸಹಮತದೊಂದಿಗೆ ಕಾರ್ಯಕ್ರಮದ ಸಮಿತಿ ರಚನೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶಾಲಿವಾನ ಬಡಿಗೇರ್, ಅಧ್ಯಕ್ಷರಾಗಿ ಬಾಬುರಾವ ಪಾಸ್ವಾನ್, ಕಾರ್ಯಾಧ್ಯಕ್ಷರಾಗಿ ಕಲ್ಯಾಣರಾವ ಭೋಸ್ಲೆ, ಪ್ರಧಾನ ಕಾರ್ಯದರ್ಶಿಯಾಗಿ ಅಂಬಾದಾಸ ಗಾಯಕವಾಡ, ಖಜಾಂಚಿಯಾಗಿ ರಘುನಾಥ ಗಾಯಕವಾಡ ಇವರನ್ನು ನೇಮಕ ಮಾಡಲಾಯಿತು. ಈ ಸಭೆಯ ಉಪಾಧ್ಯಕ್ಷರಾಗಿ ಶ್ರೀಪತರಾವ ದೀನೆ, ಅರುಣ ಕುದರೆ, ಬಾಬುರಾವ ಮಿಠಾರೆ, ದಿಲಿಪ ಭೋಸ್ಲೆ, ರಮೇಶ ಕಟ್ಟಿತುಗಾಂವ, ಅಶೋಕ ಮಾಳಗೆ, ಬುದ್ಧಪ್ರಕಾಶ ಭಾವಿಕಟ್ಟಿ ಇವರನ್ನು ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ರಾಜಕುಮಾರ ಬನ್ನೇರ್, ಮಾರುತಿ ಸೂರ್ಯವಂಶಿ, ಶಿವಕುಮಾರ ನೀಲಿಕಟ್ಟಿ, ಜೀವನ ಬುಡ್ತಾ ಇವರನ್ನು ನೇಮಕ ಮಾಡಲಾಯಿತು.

ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪ್ರದೀಪ ನಾಟೇಕರ್, ಸುರೇಶ ಜೋಜನಾಕರ್, ಶಶಿಧರ ಭಾಸನ್, ಮೋಹನ ಡಾಂಗೆ, ಝರೆಪ್ಪಾ ರಾಂಪೂರೆ, ಅಂಬರೀಶ ಕುದರೆ, ಪವನ ಗೂನಳ್ಳಿಕರ್, ರಾಹುಲ ಡಾಂಗೆ, ರವಿ ಭೂಸಂಡೆ, ಗೌತಮ ಮುತ್ತಂಗಿಕರ್, ಶಿವಕುಮಾರ ಗೂನಳ್ಳಿ, ನಿತೀಶ ಉಪ್ಪೆ, ಭಗತ್ ಸಿಂಧೆ, ಗೌತಮ ಕಂದಗೂಳ ಇವರನ್ನು ನೇಮಿಸಲಾಯಿತು.

ಕಲಾ ಮಂಡಳಿಯ ಸದಸ್ಯರಾಗಿ ರಾಜಕುಮಾರ ಶೇರಿಕಾರ, ಬಕ್ಕಪ್ಪಾ ದಂಡಿನ್, ಸುನೀಲ ಕಡ್ಡೆ, ದೇವಿದಾಸ ಚಿಮಕೋಡ, ಯೇಸುದಾಸ ಅಲಿಯಂಬರ್ ಇವರನ್ನು ನೇಮಕ ಮಾಡಲಾಯಿತು.

ಮಹಿಳಾ ಸಮಿತಿ ಗಂಗಮ್ಮ ಫುಲೆ, ರಂಜಿತಾ ಜೈನೂರ, ವೈಶಾಲಿ ಸಾಗರ, ಶಕುಂತಲಾ ಸೋನಿ, ಅರ್ಚನಾ ಕೋಣೆ, ಇಂದುಮತಿ ಮೈಲೂರಕರ್, ಗೌರಮ್ಮ ಜಾನಕೆ, ಕವಿತಾ ಡಾಂಗೆ ಇವರನ್ನು ನೇಮಿಸಲಾಯಿತು.

ಈ ಸಭೆಯ ಸಲಹಾ ಸಮಿತಿ ಸಲಹೆಗಾರರಾಗಿ ಅಮೃತರಾವ ಚಿಮಕೋಡೆ, ಅಬ್ದುಲ ಮನ್ನಾನ್ ಸೇಠ್, ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ್, ಬಸವರಾಜ ಮಾಳಗೆ, ಆನಂದ ದೇವಪ್ಪಾ, ಶಂಕರರಾವ ದೊಡ್ಡಿ, ರಾಜು ಕಡ್ಯಾಳ ಇವರನ್ನು ನೇಮಿಸಲಾಯಿತು.