ಸಂವಿಧಾನ ಜಾಗೃತಿ ಜಾಥಾ

ಕಲಬುರಗಿ:ಫೆ.3: ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.

     ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಂಪೂರ್ಣ ಶ್ರೀನಿವಾಸ ಬಣ್ಣಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನವು ಜನತೆಯ ಹಕ್ಕುಗಳ ಮೂಲವಾಗಿದೆ,ವಿಶ್ವದ ಧೀರ್ಘ ಸಂವಿಧಾನವು ನಮ್ಮದು ಹಾಗೂ ನಮ್ಮ ಸಂವಿಧಾನದ ಸೌಂದರ್ಯವೇ ಸಮಾನತೆ ಎಂದು ತಿಳಿಸಿದರು.ನಮ್ಮ ದೇಶವೂ ಸಂವಿಧಾನದ ಆಶಯದ ಮೇಲೆ ನಡೆಯುತ್ತಿದೆ.ಸಂವಿಧಾನದ ಮಹತ್ವ ಮತ್ತು ಮೌಲ್ಯವನ್ನು ಪ್ರತಿಯೊಬ್ಬರು ಅರಿವನ್ನು ಹೊಂದಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಸಮಾನರು. ಈ ಜಾಥಾ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ಸಂಧರ್ಭದಲ್ಲಿ ಚಿತ್ತಾಪೂರ ತಾಲೂಕಿನ ಅಧಿಕಾರಿಗಳು, ಹಾಗೂ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗಾರ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವರಾಜ್ ಹಾಳಕಾಯಿ, ಜಗನ್ನಾಥ ಮಠಪತಿ,ಮಾಜಿ ಉಪಾಧ್ಯಕ್ಷ ಪೀರಪ್ಪ ದೊಡ್ಡಮನಿ ಗ್ರಾಮ ಪಂಚಾಯತ ಸದಸ್ಯರಾದ ಸುನೀಲ್.ಎಂ.ಅಮ್ಮಗೋಳ, ಅನೀಲ ಹುಣಚಿಕರ್, ಆಸೀಪ್ ಮೌಜಾನ, ರಾಜು ಬಿಚ್ಚಾ, ಇಸ್ಮಾಯಿಲ ನಿಗೇವಾನ, ಈರಣ್ಣ ದಂಡೋತಿ,ಚಂದಮ್ಮ ದೊರೆ, ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.