ಸಂವಿಧಾನ ಜಾಗೃತಿ ಜಾಥಾ

ಚಿಟಗುಪ್ಪ :ಫೆ.13:ತಾಲೂಕಿನ ಮನ್ನಾಎಖೇಳಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಸಾಯಂಕಾಲ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಲೂಕು ಆಡಳಿತದಿಂದ ಚಾಲನೆ ನೀಡಲಾಯಿತು.
ತಹಸೀಲ್ದಾರ್ ರವೀಂದ್ರ ಧಾಮ, ತಾಲೂಕು ಪಂಚಾಯತ್ ಈಒ ಅಕ್ರಮ್ ಪಾಶಾ , ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ್, ಕೃಷಿ ಅಧಿಕಾರಿ ಗೌತಮ್, ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಅಗಸಿ, ಪಿಡಿಒ ಭಾಗ್ಯಜ್ಯೋತಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾಂಸ್ಕøತಿಕ ಕಾರ್ಯಕ್ರಮ ತಂಡಗಳು ವಿವಿಧ ಶಾಲಾ ಮಕ್ಕಳು ಡಾಕ್ಟರ್ ಅಂಬೇಡ್ಕರ್ ಅನುಯಾಯಿಗಳು ವಿವಿಧ ಸಮುದಾಯಗಳ ಮುಖಂಡರು ಹಾಗೂ ಗ್ರಾಮಸ್ಥರಿದ್ದರು