ಸಂವಿಧಾನ ಜಾಗೃತಿ ಜಾಥಾ

ಕೆ.ಆರ್ ಪುರ, ಫೆ.೧೯- ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಸಮಾಜ ಕಲ್ಯಾಷ ಇಲಾಖೆ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಕೆಆರ್ ಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕೆಆರ್ ಪುರದಿಂದ ಆರಂಭವಾದ ಜಾಥಾ ತಾಲ್ಲೂಕು ಕಚೇರಿ, ಆನಂದಪುರ, ಟಿಸಿಪಾಳ್ಯ, ಭಟ್ಟರಹಳ್ಳಿ, ವಸವನಪುರ, ಅಯ್ಯಪ್ಪನಗರ, ದೇವಸಂದ್ರ ಸೇರಿದಂತೆ ಹಲವು ಮುಖ್ಯರಸ್ತೆಗಳಲ್ಲಿ ಜಾಗೃತಿ ಜಾಥಾ ಮಾಡಲಾಯಿತು.
ಟಿಸಿಪಾಳ್ಯ ಸೇರಿದಂತೆ ಹಲವು ಭಾಗಗಳಲ್ಲಿ ಮಕ್ಕಳಕೈನಲ್ಲಿ ಸಂವಿಧಾನ ಬೋಧಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ೭೫ ನೇ ಸಂವಿಧಾನ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ಐಕ್ಯತಾ ಸಮಾವೇಶ ಅಂಗವಾಗಿ ಮತ್ತು ಸ್ತಬ್ದ ಚಿತ್ರ ದೊಂದಿಗೆ ಮೆರವಣಿಗೆ ನಡೆಸಿದರು. ಬಿಬಿಎಂಪಿ ಎಇಇ ವಿನಯ್ ಮಾತನಾಡಿ, ಸರ್ಕಾರದ ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬಿಇಒ ಸೇರಿದಂತೆ ಹಲವು ಇಲಾಖೆ ಕೈ ಜೋಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಇಇ ಚನ್ನಬಸಪ್ಪ, ಎಇ ಜಾದವ್ , ಕೇಶವ್, ದಮನಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಸಾಮ್ರಾಟ್ ಶೇಖರ್, ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಆಂತೋಣಿಸ್ವಾಮಿ, ರುದ್ರೇಶ್, ಮುರುಳಿ, ಲೋಕೇಶ್ ಮತ್ತಿತರರಿದ್ದರು.