ಸಂವಿಧಾನ ಜಾಗೃತಿ ಜಾಥಾ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಫೆ 17: ಸಮೀಪದ ಖಾನಾಪೂರ ತಾಲೂಕಿನ ಕೇರವಾಡ ಗ್ರಾಪಂ ಸಾರ್ವಜನಿಕರು ಸಂವಿಧಾನ ಜಾಗೃತಿ ಜಾಥಾ ರಥವನ್ನು ಗೌರವದಿಂದ ಸ್ವಾಗತಿಸಿದರು.
ಅಂಬೇಡ್ಕರ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ ತೇಗೂರ, ಉಪಾಧ್ಯಕ್ಷಣಿ ಗಂಗವ್ವಾ ತಳವಾರ, ಪಿಡಿಓ ಆರ್ ಕೆ ರೆಡ್ಡೇರ, ಸರ್ವ ಸದಸ್ಯರು ಜೊತೆಗೂಡಿ ಮಾಲಾರ್ಪಣೆ ಮಾತಿ ಪೂಜೆಗೈದರು.
ನಂತರ ತಹಶೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರವರು ಸಮಾನತೆ ಶಿಕ್ಷಣಕ್ಕಾಗಿ ಹಲವು ಹಕ್ಕುಗಳಿಗಾಗಿ ಹೋರಾಡಿ ರಚನೆ ಮಾಡಿದ ಸಂವಿಧಾನ ಇಂದು ದೇಶದಲ್ಲಿ ಪ್ರಜಾಪ್ರಭೂತ್ವ ಆಡಳಿತ ಬರಲಿಕ್ಕೆ ಕಾರಣವಾಗಿದೆ ಎಂದರು.
ಕರವೆ ಅಧ್ಯಕ್ಷ ವಿಠ್ಠಲ ಹಿಂಡಲಗಿಕರ, ತಾಪಂಇಓ ಆನಂದಕುಮಾರ ಬಿ, ರಾಜಶೇಖರ ಹಿಂಡಲಗಿ, ರಾಘವೇಂದ್ರ ಚಲವಾದಿ, ಪರಶುರಾಮ ಮಾದರ, ಕಾರ್ಯದರ್ಶಿ ಅರ್ಜುನ ನಡುವಿನಮನಿ, ಸಮಾಜ ಕಲ್ಯಾಣ ಅಧಿಕಾರಿ, ದಲಿತ ಮುಖಂಡರು ಉಪಸ್ಥಿತರಿದ್ದರು.