ಸಂವಿಧಾನ ಜಾಗೃತಿ ಜಾಥಾ


ಲಕ್ಷ್ಮೇಶ್ವರ,ಫೆ.15: ಪಟ್ಟಣದ ಪುರಸಭೆಯ ಉಮಾ ಮಹಾವಿದ್ಯಾಲಯದ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.
ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಟ್ಯಾಬ್ಲೆರ ಅಳವಡಿಸಿದ್ದ ರಥ ಗೊಜನೂರು ಮಾರ್ಗವಾಗಿ ಲಕ್ಷ್ಮೇಶ್ವರ ಪ್ರವೇಶಿಸುತ್ತಿದ್ದಂತೆಯೇ ಮಾಲಾರ್ಪಣೆ ಮಾಡಿ ಅದ್ದೂರಿಯಿಂದ ಸ್ವಾಗತಿಸಲಾಯಿತು. ಅಡರಕಟ್ಟಿ ಕ್ರಾಸಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ವೇಷಭೂಷಣಗಳು ನೃತ್ಯ ರೂಪಕಗಳು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಪುರಸಭೆಯ ಆವರಣದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಗದಗ ಜಿಲ್ಲಾಧಿಕಾರಿ ಎಂಎಲ್ ವೈಶಾಲಿಯವರು ದೇಶದ ಸ್ವಾತಂತ್ರ್ಯ ನಂತರ ಅವಶ್ಯವಾಗಿರುವ ಎಲ್ಲ ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡ ಸಂವಿಧಾನ ಹೃದಯ ಮತ್ತು ತಾಯಿ ಇದ್ದಂತೆ ಎಂದರು ಸಂವಿಧಾನವು ಶಿಕ್ಷಣ ಉದ್ಯೋಗ ಸಮಾನತೆ ಬದುಕು ಸಾಗಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ ಯಾವಾಗಲಾದರೂ ನಮ್ಮ ಹಕ್ಕಿಗೆ ಧಕ್ಕೆಯಾದರೆ ಅದರ ವಿರುದ್ಧ ಹೋರಾಡಲು ಸಂವಿಧಾನ ಅವಕಾಶ ನೀಡಿದೆ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಲ್ಲರೂ ಒಂದಾಗಿ ಸಂವಿಧಾನದ ಆಶಯವನ್ನು ಈಡೇರಿಸಿ ಘನತೆಯಿಂದ ಬದುಕು ಸಾಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ಕ್ರಾಂತಿ ಗೀತೆ ಹಾಡಲಾಯಿತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಕುರಿತು ವೇಷ ಭೂಷಣ ರೂಪಕಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ತಹಶೀಲ್ದಾರ್ ವಾಸದೇವಸ್ವಾಮಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ನೀಲಕಂಠ ಸಮಾಜ ಕಲ್ಯಾಣ ಇಲಾಖೆಯ ಎಸ್ ಬಿ ಕುಲಕರ್ಣಿ ಪುರಸಭೆಯ ಮುಖ್ಯ ಅಧಿಕಾರಿ ಮಹೇಶ್ ಹಡಪದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿಎಸ್ ಹರ್ಲಾಪುರ ಎಂಬಿ ಹೊಸಮನಿ ಸಿ ಡಿಪಿಓ ಮೃತ್ಯುಂಜಯ ಗುಡ್ಡದ ಅನ್ವೇರಿ ಮಾರುತಿ ರಾಥೋಡ್ ಫಕಿರೇಶ್ ತಿಮ್ಮಾಪುರ ಉಪ ನೊಂದಣಿ ಇಲಾಖೆಯ ಜಲರೆಡ್ಡಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಈಶ್ವರ್ ಮೆಡ್ಲೇರಿ ನಿರೂಪಿಸಿ ಕೃಷ್ಣಪ್ಪ ಧರ್ಮರ ಸ್ವಾಗತಿಸಿದರು.