ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ದೂರಿ ಸ್ವಾಗತ


ಮುನವಳ್ಳಿ,ಫೆ.11: ಭಾರತ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥ ಯಕ್ಕುಂಡಿಗೆ ಶುಕ್ರವಾರ ಸಾಯಂಕಾಲ ಆಗಮಿಸಿದಾಗ ಯಕ್ಕುಂಡಿ ಗ್ರಾಮ ಪಂಚಾಯತ ಅಧ್ಯಕ್ಷೆ ಪೈರೋಜಾ ಬಾರಿಗಿಡದ ಅವರು ಡಾ.ಬಿ ಆರ್ ಅಂಬೇಡ್ಕರ ಪುಥಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ. ಮತ್ತು ಗ್ರಾಮ ಪಂಚಾಯತ ಸರ್ವಸದಸ್ಯರು, ನಾಲ್ಕು ಗ್ರಾಮಗಳ ಗುರು ಹಿರಿಯರು, ವಿವಿಧ ಸಂಘಟನೆಯ ಅಧ್ಯಕ್ಷರು, ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೂಡಿ ಸಂಭ್ರಮದ ಸ್ವಾಗತ ಕೋರಿದರು.
ಶಾಲಾ ಮಕ್ಕಳ ವಿವಿಧ ಬಗೆಯ ವೇಷ ಭೂಷಣಗಳು ಜಾಥಾ ಮೆರವಣಿಗೆಗೆ ಮೆರಗು ತಂದು ಕೊಟ್ಟವು ಮಹೀಳಾಸಂಜೀವಿನಿ ಒಕ್ಕೂಟದ ಕುಂಭಹೂತ್ತ ಸುಮಂಗಲೆಯರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಗ್ರಾಮಸ್ಥರು ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಯಲ್ಲಿ ಭಾಗಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು.
ನಂತರ ಗ್ರಾಮ ಪಂಚಾಯತ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಪಿಡಿಓ ವೈ ಪಿ ಬೋಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮೆಳವಂಕಿ ಸಂವಿದಾನದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಗ್ರಾ ಪಂ ಉಪಾದ್ಯಕ್ಷೆ ಮಾಸಾಬಿ ಇಮ್ಮನ್ನವರ,ಗ್ರಾಮ ಪಂಚಾಯತ ಸದಸ್ಯರಾದ ಹಸನಸಾಬ ಬಾರಿಗಿಡದ,ಕೃಷ್ಣಾ ಕಂಬಾರ, ಮಂಜುನಾಥ ಪಮ್ಮಾರ, ಶಿವಾನಂದ ಕಂಬಿಯವರ, ಬಾದಶಹಾ ದೊಡಮನಿ, ಶೇಖವ್ವ ತಿಮ್ಮೇಶಿ, ಶಾಹೇಬಿ ದಿನ್ನಿಮನಿ, ಭೀಮವ್ವ ಮಾದರ, ಮಲ್ಲವ್ವ ಮಾದರ, ಹಣಮಂತ ರೂಢನ್ನವರ, ಈರಪ್ಪ ಮಾದರ, ಉಪಪ್ರಾಶುಂಪಾಲ ವಿಜಯ ಎಸ್ ಪೂಜೇರ, ಸಮಾಜ ಕಲ್ಯಾಣ ಇಲಾಖೆಯ ಆರ್ ಆರ್ ಕುಲಕರ್ಣಿ, ಗ್ರಾಮ ಆಡಳಿತಾಧಿಕಾರಿ ಮುದಕಪ್ಪ ಕದಂ, ಸಿ ಆರ್ ಪಿ ಪೆಂಟೇದ, ಎಲ್ಲ ಶಾಲೆಗಳ ಮುಖ್ಯೋಪಾಧ್ಯರು ಮತ್ತು ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು,ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಶಾಲಾ ಮಕ್ಕಳು,ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ,ಗ್ರಾಮಸ್ಥರು ಉಪಸ್ಥಿತರಿದ್ದರು.