ಸಂವಿಧಾನ ಜಾಗೃತಿ ಜಾಥಾ ಭವ್ಯ ಸ್ವಾಗತ ಕೋರಿದ ಮಿರಿಯಾಣ ಗ್ರಾಮಸ್ಥರು

ಚಿಂಚೋಳಿ,ಫೆ.12 ತಾಲೂಕಿನ ಮಿರಿಯಾಣ ಗ್ರಾಮಕ್ಕೆ ರವಿವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಮಿರಿಯಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮದ ಮಹಿಳೆಯರು ಸಂವಿಧಾನ ಭವ್ಯ ಸ್ವಾಗತ ಕೋರಿದರು.
ಗ್ರಾಮದ ಪೆÇಲೀಸ್ ಸ್ಟೇಷನ್ ನಿಂದ ಸರ್ಕಾರಿ ಪ್ರಾಥಮಿಕ ಶಾಲೆಯವರೆಗೆ ಮಹಿಳೆಯರು ಕುಂಭ ಮೇಳ ಹೊತ್ತು, ಆರತಿ ಬೆಳಗಿ ಸಡಗರ ಸಂಭ್ರಮದಿಂದ ಜಾಥಾಕ್ಕೆ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಯಶಂಕರ್ ಅವರು ಡಾ. ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದ ಚಿಂಚೋಳಿ ಪಬ್ಲಿಕ್ ಸ್ಕೂಲ್ ಶಿಕ್ಷಕರದ ಮಲ್ಲಿನಾಥ್ ಅವರು ಮಾತನಾಡಿ ಭಾರತಕ್ಕೆ ಸಂವಿಧಾನ ಸಮರ್ಪಣೆ ಮಾಡುವುದು ಬಹಳ ಸುಲಭದ ಕೆಲಸವಾಗಿದ್ದಿಲ್ಲ ಡಾ. ಬಿ ಆರ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವು ಒಟ್ಟು ಶಬ್ದಗಳು 146.485. ಮತ್ತು ಒಟ್ಟು ಪುಟಗಳ ಸಂಖ್ಯೆ 251 ಹಾಗೂ ಒಟ್ಟು ಹಸ್ತಕ್ಷರಗಳ ಸಂಖ್ಯೆ 284 ಆಗಿದ್ದು ಸಂವಿಧಾನ ಬರೆಯುವುದಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಅವರು ಎರಡು ವರ್ಷ 11 ತಿಂಗಳು 18 ದಿನಗಳು ಹಿಡಿದಿದ್ದು ಆ ಸಂವಿಧಾನ ಬಗ್ಗೆ ನಾವೆಲ್ಲರೂ ಅರಿತುಕೊಳ್ಳಬೇಕು ಈ ಭಾರತ ದೇಶವು ಸಂವಿಧಾನವಾದ ತತ್ವ ಸಿದ್ಧಾಂತ ಮೇಲೆ ಭಾರತ ಸವಿಧಾನವನ್ನು ನಡೆದಿದ್ದು ಯಾವುದೇ ಒಂದು ವಿಷಯದಲ್ಲೂ ಸಂವಿಧಾನವಿಲ್ಲದೆ ಕೆಲಸವಾಗುವುದಿಲ್ಲ ಹಾಗಾಗಿ ನಾವೆಲ್ಲರೂ ಸಂವಿಧಾನ ಬಗ್ಗೆ ಏನಾದರೂ ತಿಳಿದುಕೊಳ್ಳಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು ಕಾರ್ಯಕ್ರಮದಲ್ಲಿ ಮಿರಿಯಾಣ ಪಿಎ??? ಶಿವರಾಜ ಪಾಟೀಲ, ತಾಲೂಕ ಪಂಚಾಯತ ಪ್ಲಾನಿಂಗ್ ಆಫೀಸರ್ ಅದ ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಭುಲಿಂಗ, ಕೈಗಾರಿಕೆ ಅಧಿಕಾರಿ ನಳಿನಿ, ಕ್ಷೇತ್ರ ಶಿಕ್ಷಣ ಇಲಾಖೆಯ ನಾಗಶೆಟ್ಟಿ ಭದ್ರಶೆಟ್ಟಿ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ವೆಂಕಟಮ್ಮ ಲಾಲಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದಸರಾ ಪರ್ತೆ, ಮಿರಿಯಾಣ ಸಿ ಆರ್ ಪಿ ಗಳಾದ ನಜೀಮುನ್ನಿಸಾ ಬೇಗಂ, ಸರ್ಕಾರಿ ಪ್ರಥಮ ಶಾಲೆ ಮುಖ್ಯ ಗುರುಗಳಾದ ಪಾಂಡುರಂಗ ಶರ್ಮ, ಸಂಜೀವಕುಮಾರ್ ಪಾಟೀಲ, ಸುಧಾಕರ್ ಗೌಡ್, ಪಂಚಾಯತ ಸಿಬ್ಬಂದಿಗಳಾದ ರೇವಣಸಿದ್ದಪ್ಪ ಪಾಟೀಲ್, ವಿಶ್ವನಾಥ, ಮತ್ತು ಆನೇಕಲ್ ಗ್ರಾಮ ಪಂಚಾಯತ ಸದಸ್ಯರು ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.