ಸಂವಿಧಾನ ಜಾಗೃತಿ ಜಾಥಾ : ಉಮಲೂಟಿ ಯಲ್ಲಿ ಅದ್ದೂರಿ ಸ್ವಾಗತ

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೧೮- ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಸಂವಿಧಾನ ದಿನಾಚರಣೆ ಹಾಗೂ ರಾಷ್ಟ್ರ ಮಟ್ಟದ ಸಮ್ಮೇಳನದ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ತಾಲೂಕಿನಾದ್ಯಂತ ಐದು ದಿನಗಳ ಕಾಲ ನಿರಂತರವಾಗಿ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಚಲಿಸಿ ಜನರಲ್ಲಿ ಸಂವಿಧಾನದ ಮಹತ್ವ ,ಅದರ ರೂವಾರಿಗಳು ಹಾಗೂ ಅದರ ರಚನೆಗೆ ಸಂಬಂಧಿಸಿದಂತೆ ಸಭೆ, ಅಂಗಿಕಾರ ಕುರಿತಂತೆ ತಿಳಿಸಲಾಗುತ್ತದೆ.
ಉಮಲೂಟಿ ಗ್ರಾಮದಲ್ಲಿ ಶಾಸಕ ಬಸನಗೌಡ ತುರವಿಹಾಳ ಸ್ವಾಗತ ಮಾಡಿಕೊಂಡು ಚಾಲನೆ ನೀಡಿದರು. ಶಾಲಾ ಮಕ್ಕಳಿಂದ ನೃತ್ಯ, ಎತ್ತಿನ ಬಂಡಿ, ಮಕ್ಕಳು ವಿವಿಧ ತೊಡುಗೆಗಳನ್ನು ಧರಿಸಿಕೊಂಡು ಪ್ರತಿಯೊಬ್ಬರನ್ನು ಆಕರ್ಷಿಸಿದರು.
ತಹಶಿಲ್ದಾರ ಅರುಣ್ ಕುಮಾರ್ ದೇಸಾಯಿ, ಇಒ ಚಂದ್ರಶೇಖರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು.
ತುರವಿಹಾಳ ಪಟ್ಟಣ : ಪ್ರಮುಖರಾದ ಮಲ್ಲನಗೌಡ ದೇವರ ಮನಿ, ಪಾರುಕ್ ಸಾಬ, ಉಮರ್ ಸಾಬ,ಬಿಇಒ ಸೋಮಶೇಖರ ಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಪಿಎಸ್‌ಐ ಹುಸೇನಪ್ಪ, ಶ್ರೀ ದೇವಿ ಶ್ರೀನಿವಾಸ, ಪಟ್ಟಣ ಪಂಚಾಯತಿ ಸದಸ್ಯರು, ಯುವಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.