ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ

ಕಲಬುರಗಿ:ಮಾ.10:ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಮಾ.11 ರಂದು ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ ಅರ್ಥಪೂರ್ಣ ಮತ್ತು ಸಂಭ್ರಮದಿಂದ
ನಡೆಯಲಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಪಾದಸ್ಪರ್ಶ ಮಾಡಿದ ಶ್ರೇಷ್ಠ ನೆಲವಾದ ವಾಡಿಗೆ ಎರಡು ಬಾರಿ ಭೇಟಿ ನೀಡಿದ್ದರು. ಹೀಗಾಗಿ ಜಿಲ್ಲಾ ಕೇಂದ್ರದಲ್ಲಿ ನಡೆಯಬೇಕಿದ್ದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ವಾಡಿಯಲ್ಲಿ ನಡೆಯುತ್ತಿದೆ ಎಂದರು.
ದೇಶದ ಸಂವಿಧಾನ ಜಾಗೃತಿ ಮೂಡಿಸುವ ಕೆಲಸ ರಾಜ್ಯದಲ್ಲಿ ವೈಶಿಷ್ಟ ಪೂರ್ಣ ಮಾಡಲಾಗುತ್ತಿದೆ. ಅಪಾರ ಜನಸಂಖ್ಯೆಯಲ್ಲಿ ಪ್ರಥಮವಾಗಿ ಸೇರುವ ಮೂಲಕ ಇದೊಂದು ಐತಿಹಾಸಿಕ ಸಮಾರಂಭ ನಡೆಯಲಿದೆ. ಎಲ್ಲ ಸಮಾಜಗಳ ಮುಖಂಡರು, ದಲಿತ ಪರ ಸೇರಿದಂತೆ ಎಲ್ಲ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.