ಸಂವಿಧಾನ ಜಾಗೃತಿ ಜಾಥಾಗೆ ಸ್ವಾಗತ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ, ಫೆ.17: ಇಂದು ಕುಂದಗೋಳ ತಾಲೂಕಿನ ಹಿರೇನರ್ತಿ, ಗುಡೆನಕಟ್ಟಿ, ಯರಗುಪ್ಪಿ ಹಾಗೂ ರೊಟ್ಟಿಗವಾಡ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಯಿತು.

ಗ್ರಾಮಸ್ಥರು ಜಾಗೃತಿ ಜಾಥಾ ವಾಹನಕ್ಕೆ ಆರತಿ ಬೆಳಗಿಸುವುದರ ಮೂಲಕ ಸ್ವಾಗತ ಕೋರಿದರು. ವಿದ್ಯಾರ್ಥಿಗಳು ಆಕರ್ಷಕ ಕೋಲಾಟ, ನೃತ್ಯ, ಹಾಡುಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಮಹಿಳೆಯರ ಡೊಳ್ಳು ಕುಣಿತ, ಮುತ್ತೈದೆಯರ ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಜೈ ಭೀಮ್, ಅಂಬೇಡ್ಕರ್ ಕುರಿತಾದ ಜಯಘೋಷಗಳನ್ನು ಸಾರ್ವಜನಿಕರು ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ರಸ್ತೆಗಳಲ್ಲಿ ಚಿತ್ತಾಕರ್ಷಕವಾಗಿ ರಂಗೋಲಿಗಳನ್ನು ಬಿಡಿಸಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಮೀನಾಕ್ಷಿ ಗುದಗಿಯವರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಭಾರತಿ ಮೆಣಸಿನಕಾಯಿ, ಹಿರೇನರ್ತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುಸಿದ್ದಗೌಡ ಯ ಮೇಲ್ಮಾಳಗಿ, ಉಪಾಧ್ಯಕ್ಷರಾದ ಶಿಲ್ಪಾ ಕ ಹರಕುಣಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಶೈಲಾ ಶ್ರೀಶೈಲ್ ನೆಲಗಾರ, ಗುಡನೇಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಂಕರವ್ವ ಗುರುಪಾದಪ್ಪ ಹೊಸಳ್ಳಿ, ಉಪಾಧ್ಯಕ್ಷರಾದ ತಾಯವ್ವ ನಿಂಗಪ್ಪ್ ಕೆಂಚಣ್ಣವರ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಿ.ಎನ್. ಕೊಳೇರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ದಿ ಅಧಿಕಾರಿಗಳು, ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಹಿರೇನರ್ತಿ, ಗುಡೆನಕಟ್ಟಿ, ಯರಗುಪ್ಪಿ ಹಾಗೂ ರೊಟ್ಟಿಗವಾಡ ಗ್ರಾಮಗಳ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.