ಸಂವಿಧಾನ ಜಾಗೃತಿ ಜಾಥಾಕ್ಕೆ ಭವ್ಯ ಸ್ವಾಗತ

ಗುರುಮಠಕಲ್:ಫೆ.12: ಕೋಂಕಲ ಗ್ರಾಮ ಪಂಚಾಯಿತಿಯಿಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಚಿನ್ನಾಕಾರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಕೊಂಡರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸ್ತಬ್ಧ ಚಿತ್ರಗಳ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವೇದಿಕೆ ಒದಗಿಸಿ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂಗಮೇಶ ಪೂಜಾರಿ ಮಾತನಾಡಿ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ವಿಶ್ವದ ಮೇರು ವ್ಯಕ್ತಿತ್ವದ ಮಹಾ ಮೇಧಾವಿಗಳಲ್ಲೋಬ್ಬರು. ಈಡೀ ವಿಶ್ವದಲ್ಲಿಯೇ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸುವ ರಾಷ್ಟ್ರ ನಮ್ಮದು. ಎಲ್ಲಾರು ಗೌರವಯುತ ಜೀವನವನ್ನು ನಡೆಸಿ ಕೊಂಡು ಹೋಗುವಂತಹ ಅದ್ಬುತ ಚೇತನ ಶಕ್ತಿಯನ್ನು ಪಡೆದ ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು .ಅರಿತು ತಿಳಿಯೋಣ ಇವರು ಭಾರತ ರತ್ನ ಅಲ್ಲ ವಿಶ್ವ ರತ್ನ ಎಂದು ಹೇಳಿದರು. ನಿಮ್ಮ ಸುತ್ತಮುತ್ತಲ್ಲಿರುವ ಪರಿಚಿತರಿಗೆ ಶಿಕ್ಷಣದ ಮಹತ್ವ ಕುರಿತು ಬೋಧಿಸಿ. ಅವರನ್ನು ವಿದ್ಯಾವಂತರನ್ನಾಗಿ ತಯಾರು ಮಾಡಿರಿ ಎಂದರು.ಗುಂಜನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸುಭಾಷ್ ಅವರು ಸಂವಿಧಾನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಧರ್ಮಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಸವೀತ ಸಂವಿಧಾನ ಪೀಠಿಕೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಚಿನ್ನಾಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾತಿಮಾ ಬಿ. ಸೆಕ್. ಉಪಾಧ್ಯಕ್ಷ ಗೋಪಾಲ. ಮುಖ್ಯ ಅತಿಥಿಗಳಾಗಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರವೀಣ ಕುಮಾರ. ಗ್ರೇಡ್ -2 ತಹಸಿಲ್ದಾರ್ ನರಸಿಂಹ ಸ್ವಾಮಿ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ ಚೌವ್ಹಾಣ್. ಮುಖ್ಯ ಗುರುಮಾತೆ ಬಾಲಮ್ಮ. ಕೋಂಕಲ ವಲಯ ಸಿ ಆರ್ ಪಿ ಸಿದ್ದಲಿಂಗ. ಎಸ್ ಡಿ ಎಂ ಸಿ ಅಧ್ಯಕ್ಷ ದೇಸಪ್ಪ. ಆರೋಗ್ಯ ಇಲಾಖೆ ನಾಗರಾಜ. ಹಾಗೂ ಎಂಟನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೀ ಪ್ರಾರ್ಥನೆ ಗೀತೆ ಹಾಡಿದರು. ಅಂಜನಾದೇವಿ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು. ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಮುಖಂಡರು ಹಾಗೂ ಪೆÇೀಲಿಸ್ ಸಿಬ್ಬಂದಿಯವರು ಇದ್ದರು