ಸಂವಿಧಾನ ಜಾಗೃತಿ ಜಾಥಕ್ಕೆ ಅದ್ದೂರಿ ಸ್ವಾಗತ

ಬಸವನಬಾಗೇವಾಡಿ:ಫೆ.12: ತಾಲೂಕಿನ ಯರನಾಳ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಕ್ಕೆ ಸುಮಂಗಲಿಯರು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾ ಸ್ವಾಗತಿಸಿಕೊಂಡರು.

ಸಂವಿಧಾನ ದಿನಾಚರಣೆ ನಿಮಿತ್ಯ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದ ಮೆರೆಗೆ ರಾಜ್ಯದ್ಯಂತ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಹಾಗೂ ಸ್ಥಬ್ದ ಚಿತ್ರ ಮೆರಣಿಗೆಯೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಚಾಯಿತಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು.

ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಬ ಮೇಳ, ಶಾಲಾ ಮಕ್ಕಳ ಲೆಜಿಮ್, ಡೊಳ್ಳು ವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು, ಸಾರವಾಡದ ಗೊಂಬೆ ಕುಣಿತ ಗಮನ ಸೆಳೆಯಿತು.

ಈ ಸಂಧರ್ಭದಲ್ಲಿ ಗ್ರಾ,ಪಂ ಅಧ್ಯಕ್ಷ ಶಾಂತಾಬಾಯಿ ಶಿವಪ್ಪ ಕೋಲಕಾರ, ಉಪಾಧ್ಯಕ್ಷ ಹಣಮಂತ ಮಲ್ಲಿಕಾರ್ಜುನ ಹಾದಿಮನಿ, ಪಿಕೆಪಿಎಸ್ ಅಧ್ಯಕ್ಷ ಸಂಗನಬಸಪ್ಪ ತಳೇವಾಡ, ಬಸವರಾಜ ಸಿ ಮಾರನೂರ, ಡಾ, ಶ್ರೀಶೈಲ ಕೂಡಗಿ, ಎಂ,ಬಿ ಪಡಶೆಟ್ಟಿ, ಶಿವರುದ್ರ ಕರಾಬಿ, ಕುಮಾರ ಮರೇಪ್ಪ ಕರಾಬಿ, ಪಿ ವೈ ರಾಮಾರಾತ ಪಿಡಿಒ ರವಿ ಗುಂಡಳ್ಳಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.