ಸಂವಿಧಾನ ಕುರಿತು ಭಾಷಣ ಸ್ಪರ್-ಪಲ್ಲವಿ ಕೊಸಗಿ

ರಾಯಚೂರು.ಮಾ.೨೫-ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಅಂಗವಾಗಿ ಭಾರತ ಸಂವಿಧಾನ ಕುರಿತು ಭಾಷಣ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಲ್ಲವಿ ಕೊಸಗಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ನನ್ನ ಸ್ವಂತ ಖರ್ಚಿನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಭಾರತ ಸಂವಿಧಾನದ ಕುರಿತು ಭಾಷಣ ಸ್ಫರ್ಧೆಯನ್ನು ಹಮ್ಮಿಕೊಳ್ಳಗಿದ್ದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಂವಿಧಾನದ ಕುರಿತು ಭಾಷಣದ ವಿಡಿಯೋವನ್ನು ಏ.೧೦ರೊಳಗೆ ಮೊಬೈಲ್. ೯೦೧೯೭೫೫೦೨೬ ಈ ಸಂಖ್ಯೆಗೆ ಕಳುಹಿಸಿಕೊಡಿ ಸ್ಫರ್ಧೆಯಲ್ಲಿ ವಿಜೇತರಾದ ೧೦ ಜನ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನವನ್ನು ವಿತರಿಸಲಾಗುತ್ತದೆ.
ಭಾರತ ಸಂವಿಧಾನದ ರಚನೆ ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈರಣ್ಣ, ರಾಜೇಶ್ವರಿ ಸೇರಿದಂತೆ ಇನ್ನಿತರರು.