ಸಂವಿಧಾನದ ಸಿದ್ದಂತಾಗಳನ್ನು ಅರ್ಥೈಸಿಕೊಂಡು ಬದುಕಿ

ಸಿಂದಗಿ :ಫೆ.11: ತುಳಿತಕ್ಕೆ ಒಳಗಾದ ಯಾವುದೇ ಜಾತಿ ಧರ್ಮ ಸಮಾಜಗಳ ನ್ಯಾಯ ಕೊಡಿಸುವ ನಿಟ್ಟಿನಲ್ಲಿ
ಸಮ ಸಮ ಸಮಾಜ ನಿರ್ಮಾಣಕ್ಕೆ ಡಾ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಡಕುಗಳನ್ನು ರಚಿಸಿ ನ್ಯಾಯ ಕೊಡಿಸಿದ ಕೀರ್ತಿ ಅಂಬೇಡ್ಕರ ಅವರಿಗೆ ಸಲ್ಲುತ್ತದೆ ನಾವೆಲ್ಲರೂ ಸಂವಿಧಾನದ ಸಿದ್ದಂತಾಗಳನ್ನು ಅರ್ಥೈಸಿಕೊಂಡು ಬದುಕಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಸಿರ್ಂಗ ಪ್ರಸಾದ ತಿವಾರಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾತಾ ರಥವನ್ನು ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳು ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಹಾಗೂ ಡಿ. ಎಸ್. ಎಸ್. ಸಂಘದ ಪದಾಧಿಕಾರಿಗಳು ವಾದ್ಯ ವೈಭವ ಹಾಗೂ ವಿಶೇಷವಾಗಿ ಮುತೈದೆಯರ ಕುಂಭಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಸಂದರ್ಭದಲ್ಲಿ ಡಾ,ಅಂಬೇಡ್ಕರ ಅವರಿಗೆ ಮಾಲಾರ್ಪಣೆ ಮಾಡಿ ಗೌರವಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ನಮ್ಮದು ಕೇವಲ ಒಂದೇ ಸಮುದಾಯದಕ್ಕಾಗಿ ರಚಿಸಿದ ಸಂವಿಧಾನವಲ್ಲ ಇಡೀ ದೇಶದ ಎಲ್ಲ ಹಿತಾಶಕ್ತಿ ಕಾಪಾಡುವ ಸಂವಿಧಾನ ನಮ್ಮದಾಗಿದೆ ಅದನ್ನು ರಕ್ಷಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಡಾ, ಬಾಬಾಸಾಹೇಬ್ ಅಂಬೇಡ್ಕರ ಅವರು ರಚಿದ ಸಂವಿಧಾನದ ಮೂಲ ಆಶಯಗಳು ಸಾರ್ವಜನಿಕರಿಗೆ ಮನೆ ಮಾತಾಗಲಿ ಎಂದು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ರಾಜ್ಯ ಸರ್ಕಾರದ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ನಾವೆಲ್ಲರೂ ಸಂವಿಧಾನದ ಪೀಠಿಕೆಗಳನ್ನು ಓದುವುದರ ಜೊತೆಗೆ ಇತರರಿಗೂ ಕೂಡ ಜಾಗೃತಿ ಮೂಡಿಸಬೇಕು ಎಂದರು.
ನಂತರ ಅನೇಕ ಸಮುದಾಯದ ಮುಖಂಡರು ಸಾಂದರ್ಭಿಕವಾಗಿ ಮಾತನಾಡಿದರು.
ಶ್ರೀಕ್ಷೇತ್ರ ಘತ್ತರಗಿ ಕ್ರಾಸ್ ನಿಂದ ಸಂವಿಧಾನ ಜಾಗೃತಿ ರತವನ್ನು ಕುಂಭಮೇಳ, ಡೊಳ್ಳು ಕುಣಿತ ವಾದ್ಯ ವಿಭಾವದೊಂದಿಗೆ ನೂರಾರು ವಿದ್ಯಾರ್ಥಿಗಳು ಶಿಕ್ಷಕರು ಆಶಾ ಅಂಗನವಾಡಿ ಕಾರ್ಯಕರ್ತೆಯರು ಯುವಕರು ಹಿರಿಯರು ಸೇರಿ ಅದ್ದೂರಿಯಾಗಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯರಾದ ಮೈಬೂಬಸಾಬ ಕಣ್ಣಿ, ನಿಂಗಣ್ಣಗೌಡ ಪಾಟೀಲ್, ಚಂಮ್ಮುಗೌಡ ಪಾಟೀಲ್, ಎಂ ಟಿ ಸಿಂಗೆ, ಧರ್ಮರಾಜ ಯಂಟಮಾನ್, ರವಿಕಾಂತ ನಡುವಿನಕೇರಿ, ಇನಾಯತ ದೊಡಮನಿ, ಭೂತಾಳಿ ವಸ್ತಾರಿ, ಸಲೀಮ್ ಕಣ್ಣಿ, ಅರುಣ ಸಿಂಗೆ, ನಿಂಗಣ್ಣ ವಾಲಿಕಾರ, ಹಾವಣ್ಣ ಕಕ್ಕಳಮೆಲಿ, ಚನ್ನು ಬಳಗನೂರ, ಶರಣು ವಸ್ತಾರಿ, ಸೇರಿದಂತೆ ಸುತ್ತಲಿನ ಗ್ರಾಮದ ದಲಿತ ಮುಖಂಡರು ಸಂಘಟನಾಕಾರರು ಇದ್ದರು.