ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯೋಣ: ರೇಣುಕಾದೇವಿ.

ಸಂಜೆವಾಣಿವಾರ್ತೆ

ಹರಪನಹಳ್ಳಿ.ಫೆ.22; ಸಂವಿಧಾನದ ತತ್ವಾದರ್ಶಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನ ಕುರಿತು ಅರಿವು ಹೊಂದಬೇಕು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಣುಕಾದೇವಿ ತಿಳಿಸಿದರು.ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷ ಪೂರ್ಣಗೊಂಡ ಪ್ರಯುಕ್ತ ತಾಲೂಕಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ತೋಗರಿಕಟ್ಟೆ ಗ್ರಾಮದಲ್ಲಿ ಸ್ವಾಗತಿಸಿ ಮಾತನಾಡಿದ ಅವರು ಸಂವಿಧಾನದ ಮೌಲ್ಯ ಮತ್ತು ಅದರ ಆಶಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ವರು ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು. ತಾಲೂಕಿನ ತೊಗರಿಕಟ್ಟೆ, ಹಾರಕನಾಳು, ಮಾಡಲಗೇರಿ, ಕೂಲ್ಲಹಳ್ಳಿ, ಬಾಗಳಿಯಲ್ಲಿ ಜಾಥಾ ಸಂಚರಿಸಿ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.ಫೆ.13ರಂದು ಹರಪನಹಳ್ಳಿ ಪಟ್ಟಣದ ಐ.ಬಿ.ವೃತ್ತದಿಂದ ಜಾಥಾ ಆರಂಭಗೊAಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ನಂದಿಬೇವೂರು, ಮೈದೂರು, ಚಿಗಟೇರಿ, ಬೆಣ್ಣಿಹಳ್ಳಿ ಗ್ರಾಮಗಳಲ್ಲಿ ತೆರಳಿ ಮತ್ತಿಹಳ್ಳಿಯಲ್ಲಿ ವಾಸ್ತವ ಹೂಡಲಿದೆ.ಮಾಡಲಗೇರಿಯಲ್ಲಿ ಜಾಥಾದ ಅಂಗವಾಗಿ ಮಕ್ಕಳಿಂದ ಕೋಲಾಟ ಪ್ರದರ್ಶನಗೊಂಡಿತು, ಹಾರಕನಾಳು, ಮಾಡಲಗೇರಿ, ತೋಗರಿಕಟ್ಟೆ, ಕೂಲಹಳ್ಳಿ, ಬಾಗಳಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಸಾರ್ವಜನಿಕರು ಇದ್ದರು.