ಸಂವಿಧಾನದ ಮೂಲಕ ದೇಶದ ಜನರಿಗೆ ಸ್ವಾತಂತ್ರ್ಯ ಶಾಸಕ ಡಿ ಎಸ್ ಹೂಲಗೇರಿ ಅಭಿಮತ.

ಲಿಂಗಸುಗೂರು.ಜು.೩೦- ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಡೆದ ಆಜಾದಿ ಕಾ ಅರ್ಮುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಡಿ ಎಸ್ ಹೂಲಗೇರಿ ಇವರು ಭಾರತ ದೇಶದಲ್ಲಿ ಸಂವಿಧಾನ ತನ್ನದೇ ಆದಂತಹ ವಿಶಿಷ್ಟ ರೀತಿಯಲ್ಲಿ ಮಹತ್ವ ಪಡೆದಿದೆ ಆದರೆ ದೇಶದಲ್ಲಿ ಸಂವಿಧಾನಕ್ಕೆ ಅವಮಾನ ಮಾಡಿದ ಘಟನೆಗಳು ನಡೆಯುತ್ತಲೇ ಇರುತ್ತವೆ ಇದರಿಂದ ಸಂವಿಧಾನ ರಕ್ಷಣೆಗಾಗಿ ಈಗಿನ ಜನಪ್ರತಿನಿಧಿಗಳು ಮುಂದಾಗಬೇಕು ಎಂಬುದು ನನ್ನ ಅಭಿಮತ ವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಕೊಡಿಗೆ ಅನೇಕ ಮಾಹನ್ ನಾಯಕರ ಲಕ್ಷಾಂತರ ಜನರ ಪ್ರಾಣ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಅಂದಿನಿಂದ ಇಂದಿನವರೆಗೂ ಅಂದರೆ ಸ್ವಾತಂತ್ರ್ಯ ಬಂದು ೭೫ ವರ್ಷಗಳ ಆಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿಯಮ ಪ್ರಕಾರ ಭಾರತದಲ್ಲಿ ಅಗಸ್ಟ್ ತಿಂಗಳಲ್ಲಿ ಆಜಾದಿ ಕಾ ಅರ್ಮುತ್ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು
ಅಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಲು ಪಣ ತೊಡಬೇಕು ಎಂದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಸಾಹಾಯಕ ಆಯುಕ್ತರಾದ ರಾಹುಲ್ ಸಂಕನೂರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಪುರಸಭೆ ಉಪಾಧ್ಯಕ್ಷ ಎಂಡಿ ರಫೀ ಮುಖಂಡರಾದ ಪಾಮಯ್ಯ ಮುರಾರಿ ಪರುಶುರಾಮ ನಗನೂರ ಪಿ ಜಿ ಬಿ ಬ್ಯಾಂಕ್ ನಿವೃತ್ತ ದೇವಿಕೆರಿ ಪ್ರೀನ್ಸಿಪಾಲ ಮುರುಘೇಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.