ಸಂವಿಧಾನದ ಮುಂದೆ ಎಲ್ಲರೂ ಸಮಾನರು : ಕೆ.ಚಂದ್ರಪ್ಪ


ಸಂಜೆವಾಣಿ ವಾರ್ತೆ
ಸಂಡೂರು : :ಫೆ:21:  ಸಂವಿಧಾನದ ಮುಂದೆ ಎಲ್ಲರೂ ಗಂಡು,ಹೆಣ್ಣು,ಜಾತಿ,ಧರ್ಮವೆನ್ನದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ನಮ್ಮ ಸಂವಿಧಾನ ನೀಡಿದೆ ಎಂದು ಕೆ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಕೃಷ್ಣಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಜೆ ನಡೆದ ‘ ಸಂವಿಧಾನ ಜಾಗೃತಿ ಜಾಥಾ ‘ವೇದಿಕೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು. ಸಂವಿಧಾನವು ಶಿಕ್ಷಣ,ಸ್ವಾತಂತ್ರ್ಯ,ಸಮಾನತೆಯ ಹಕ್ಕುಗಳನ್ನು ನೀಡಿದೆ.ಕಾನೂನು ಅರಿವು,ಸಂವಿಧಾನ ಪ್ರಜ್ಞೆ ಕಡಿಮೆಯಿದ್ದಾಗ ಮಾತ್ರ ದುಷ್ಕøತ್ಯಗಳು ಹೆಚ್ಚಾಗುತ್ತವೆ.ಯುವ ಜನತೆಗೆ ಕಾನೂನು ಪ್ರಜ್ಞೆಯನ್ನು ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಜವಬ್ದಾರಿಯಾಗಿದೆ. ಸಂವಿಧಾನ ನಮ್ಮನ್ನೆಲ್ಲಾ ರಕ್ಷಿಸುವ ಬಹುದೊಡ್ಡ ಗ್ರಂಥವಾಗಿದ್ದು ಸಮಾನತೆ,ಸ್ವಾತಂತ್ರ್ಯ,ನ್ಯಾಯ ,ಭ್ರಾತೃತ್ವದ ಮೇಲೆ ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಷಣ,ಚಿತ್ರಕಲೆ ಹಾಗೂ ಸಂವಿಧಾನ ಪೀಠಿಕೆ ಪಠಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸ್ಥಳೀಯ ಸರ್ಕಾರಿ ಶಾಲೆಗಳ ಮುಖ್ಯಗುರುಗಳಿಗೆ ಸಂವಿಧಾನ ಪೀಠಿಕೆ ಫಲಕಗಳನ್ನು ನೀಡಲಾಯಿತು. ಇದೇ ವೇಳೆ ಪರಶುರಾಮ್ ಅಂಗೂರ ತಂಡದವರಿಂದ ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇಣುಕಮ್ಮ ,ಉಪಾಧ್ಯಕ್ಷೆ ಆಶಾಬೀ, ಬಿಇಒ ಡಾ.ಐ.ಆರ್ ಅಕ್ಕಿ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ,ಪಿಡಿಒ ಗುರುಪ್ರಸಾದ್, ಮುಖ್ಯಗುರುಗಳಾದ ಸೈಫುಲ್ಲಾ ಖಾದರ್ ,ಸಿಆರ್ ಪಿ ಶೇಖರ್ ಪಾಟೀಲ್ ,ಇಸಿಒ ಬಸವರಾಜ್ ,ಶಿಕ್ಷಕರಾದ ಶ್ರೀನಿವಾಸ್ ,ಶೈನಾಜ್, ಕಲ್ಪನಾ,ಸುನಿತಾ,ಅನಿತಾ,ವೀಣಾ,ಹೇಮಲತಾ,ಸೌಮ್ಯ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಭಾಗವಹಿಸಿದ್ದರು.