ಸಂವಿಧಾನದ ಪ್ರತಿಜ್ಞಾ ವಿಧಿ ಬೊಧನೆ


ಚಿತ್ರದುರ್ಗ. ನ.೨೭; ರಾಷ್ಟ್ರೀಯ ಸಂವಿಧಾನ ದಿನವನ್ನು ಎಸ್.ಜೆ.ಎಂ ಕಾನೂನು ಕಾಲೇಜಿನಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್, ಎಸ್ ಇವರ ಅಧ್ಯಕ್ಷತೆಯೊಂದಿಗೆ ಪ್ರೊ.ಎಸ್.ಹೆಚ್.ಪಟೇಲ್ ಅಣಕು ನ್ಯಾಯಾಲಯ ಸಭಾಂಗಣದಲ್ಲಿ ಅತಿಥಿಗಳೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಶ್ರೀಮತಿ ಶೈಲಜ.ಟಿ, ಅರ್ಥಶಾಸ್ತç ಉಪನ್ಯಾಸಕರು ಬೋಧಿಸುವುದರ ಮೂಲಕ ನಾವೆಲ್ಲರೂ ಸಂವಿಧಾನದ ವಿಧಿಯನ್ನು ಪಾಲನೆ ಮಾಡುತ್ತೇವೆಂದು ಪ್ರತಿಜ್ಞೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ಕೆ.ಎನ್.ವಿಶ್ವನಾಥ, ಸಹ ಪ್ರಾಧ್ಯಾಪಕರು, ಎಸ್.ಜೆ.ಎಂ ಕಾನೂನು ಮಹಾವಿದ್ಯಾಲಯ, ಚಿತ್ರದುರ್ಗ, ಇವರು ಸಂವಿಧಾನ ಜಾರಿಗೊಳಿಸಿದ ದಿನದಿಂದಲೂ ಕಾನೂನು ದಿನವನ್ನಾಗಿ ಆಚರಿಸಿದ್ದು 2015ರಿಂದ ಇದನ್ನು ಸಂವಿಧಾನ ದಿನವೆಂದು ಮತ್ತು ಅದರ ಮಹತ್ವವನ್ನು ಸವಿಸ್ತಾರವಾಗಿ ಮಾತನಾಡುತ್ತಾ ಶ್ರೀಮತಿ ಸುಮನ ಎಸ್.ಅಂಗಡಿ ಮತ್ತು  ಲೋಕೇಶ ರೆಡ್ಡಿ ಕೆ.ವಿ, ಸಹ ಪ್ರಾಧ್ಯಾಪಕರು, ಶ್ರೀಮತಿ ಮಂಜುಳ.ಬಿ.ಎಸ್ ಹಾಗೂ ಕು.ಅಭಿನೇತ್ರಿ ಪಟವರ್ಧನ್, ಸಹಾಯಕ ಪ್ರಾಧ್ಯಾಪಕರು, ಸಂವಿಧಾನ ಅಸ್ತಿತ್ವಕ್ಕೆ ಬಂದ ವಿಚಾರವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಬೋಧಕೇತರ ವರ್ಗದವರಾದ .ವೀರಯ್ಯ ಹಿರೇಮಠ ಮತ್ತು ಶ್ರೀಮತಿ ವಿಜಯ ಎಂ.ಬಿ. ಹಾಜರಿದ್ದರು.