ಸಂವಿಧಾನದ ಪರಿಚ್ಛೆದ 15ರ ಮಹತ್ವದ ಕುರಿತು ಜಾಗೃತಿ ಅಗತ್ಯ: ಡಾ.ಮಾಲೆ

ಕಲಬುರಗಿ,ನ.15- ಹಿಂಸೆ, ಶೋಷಣೆ ಮತ್ತು ತಾರತಮ್ಯವ ವಿರುದ್ದ ಮೆಟ್ಟಿ ನಿಲ್ಲುವುದಕ್ಕೆ ಸಂವಿಧಾನದ ಪರಿಚ್ಛೆದ 15ರಲ್ಲಿ ಮಹತ್ವ ನೀಡಲಾಗಿದೆ ಇಂತಹ ಸಮಸ್ಯೆಗಳ ಪರಿಹಾರ ಕಂಡುಕೊಡುವುದೇ ಪರಿಚ್ಛೆಧ 15ರ ಮುಖ್ಯ ಉದ್ದೇಶವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕಾನೂನು ಅಧ್ಯಯನ ವಿಭಾದ ಮುಖ್ಯಸ್ಥರಾದ ಡಾ.ದೇವಿದಾಸ ಜಿ.ಮಾಲೆ ಅವರು ಹೇಳಿದರು.
ನಗರದ ಹಳೆ ಜೇವರ್ಗಿ ರಸ್ತೆ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಮಹಿಳಾ ಪ್ರಗತಿಪರ ಚಿಂತಕರ ವೇದಿಕೆ ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜು ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಅನುಚ್ಛೇದ 15ರ ಮಹತ್ವದ ಕುರಿತು ಜಾಗೃತಿ ಹಾಗೂ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪದ್ಮಣ್ಣ ರಾಸಣಗಿ ವಹಿಸುವರು. ಸನ್ಮಾನಿತರಾಗಿ ಡಾ.ಎಂಎಸ್ ಪಾಸೋಡಿ ಆಗಮಿಸಿದ್ದರು. ವೇದಿಕೆ ಅಧ್ಯಕ್ಷೆ ಡಾ.ನಾಗರತ್ನ ದೇಶಮಾನ್ಯೆ, ಮಲ್ಲಿಕಾರ್ಜುನ ಶೆಟ್ಟಿ, ಮೀನಾಕ್ಷಿ ವಿಜಯಕುಮಾರ, ಡಾ.ಜಗದೇವೆ ಧರಣಿ ಸ್ವಾಗತಿಸಿದರು. ಡಾ.ಸಂತೋಷ ಹೂಗಾರ ವಂದಿಸಿದರು. ಮೀನಾಕ್ಷಿ ವಿಜಯಕುಮಾರ, ಸುರೇಶ, ಜ್ಯೋತಿ, ಅಶ್ವಿನಿ ಸೇರಿದಂತೆ ಹಲವುಜನ ಗಣ್ಯಮಾನ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.