ಸಂವಿಧಾನದ ತತ್ವಗಳ ಆಶಯಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಿ:-ಬಿ. ಸದಾಶಿವ ಪ್ರಭು.

ಸಂಜೆವಾಣಿವಾರ್ತೆ 

ಹರಪನಹಳ್ಳಿ. ಫೆ.15;ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಗ್ರಾಮದ ಹೊರಗಿನ ಕೋಲ ಶಾಂತೇಶ್ವರ ಮಠದಿಂದ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಬಿ. ಸದಾಶಿವ ಪ್ರಭು ಪೂಜೆ ಹಾಗೂ ಮಾಲಾರ್ಪಣೆ ಮಾಡಿ ವಿವಿಧ ವಾದ್ಯಗಳೊಂದಿಗೆ, ಎಲ್ಲಾ ಶಾಲೆಯ ಮಕ್ಕಳು ಕುಂಭ,ಕಳಸದೊಂದಿಗೆ ಪಟಾಕಿ ಸಿಡಿಸುತ್ತಾ ಅರಸೀಕೆರೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.ಜಿಲ್ಲಾ ಜಿಪಂ. ಮುಖ್ಯ ಕಾರ್ಯನಿರ್ವಾಹಕಧಿಕಾರಿ ಬಿ. ಸದಾಶಿವ ಪ್ರಭು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜೆಲ್ಲೆಯಲ್ಲಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಸಂವಿಧಾನದ ತತ್ವಗಳ ಆಶಯಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.ಈ ಭಾಗದಲ್ಲಿ ಜಾಥಾ ಕಾರ್ಯಕ್ರಮ ಇಷ್ಟೊಂದು ಉತ್ತಮ ರೀತಿಯಲ್ಲಿ ಹಮ್ಮಿಕೊಳ್ಳಲು ಸಹಕಾರ ನೀಡಿದ ಸ್ಥಳೀಯ ಗ್ರಾ. ಪಂ.ಆಡಳಿತಕ್ಕೆ, ಮಕ್ಕಳನ್ನು ಕರೆತಂದು ಪಾಲ್ಗೊಳ್ಳುವಂತೆ ಮಾಡಿದ್ದಕ್ಕೆ ಶಿಕ್ಷಕವೃಂದ ಹಾಗೂ ಸಹಕಾರ ನೀಡಿದ ಸರ್ವರನ್ನೂ ಜಿಲ್ಲಾಡಳಿತದ ಪರವಾಗಿ ಅಭಿನಂದಿಸಿದರು. ಸಮಾಜ ಕಲ್ಯಾಣ ಇಲಾಖೆಯ ವಿಜಯನಗರ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಮಕ್ಕಳಿಂದ ಭಾಷಣ,ಹಾಡು, ನೃತ್ಯ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಎಲ್ಲಾ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್,ತಾ.ಪಂ.ಇಒ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅದಾಮ್ ಸಾಹೇಬ್, ಅಡ್ಡಿ ಚನ್ನವೀರಪ್ಪ, ಅಕ್ಕಮ್ಮ, ಚಂದ್ರಪ್ಪ, ರೇಖಾ, ವಿಶಾಲ, ಫರ್ಜಾನ ಬಾನು, ಮುಖಂಡರಾದ ಪೂಜಾರ್ ಮರಿಯಪ್ಪ, ಹಾಲೇಶ್, ಅಂಜಿನಪ್ಪ, ಎ.ಡಿ.ಲಕ್ಕಣ್ಣನವರ್, ಪಿಡಿಒ. ಅಂಜಿನಪ್ಪ, ಕಾರ್ಯದರ್ಶಿ ನಾಗರಾಜ್, ಎಲ್ಲಾ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು, ಕಲಾವಿದರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.