ಸಂವಿಧಾನದ ಜಾಗ್ರತಿ ನಿತ್ಯ ನಡೆಯಲಿ: ನಿಜಲಿಂಗ ದೊಡ್ಮನಿ

ಜೇವರ್ಗಿ 26 : ಸಂವಿಧಾನದ ಜಾಗ್ರತಿ ಕಾರ್ಯಕ್ರಮಗಳು ನಿತ್ಯ ಜರುಗಬೇಕು. ಸರ್ವ ಜನರಿಗೆ ಶಾಂತಿಯ ತೋಟ ನಿರ್ಮಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜೇವರ್ಗಿ ಮತ್ತು ಯಡ್ರಾಮಿ ತಾಲೂಕಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಸಂವಿಧಾನದ ರಕ್ಷಣೆ ಭಾರತದ ಐಕ್ಯತೆ” ದಿ. ಶಾಂತಪ್ಪ ಕಟ್ಟಿಮನಿ ಮುದೋಳ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದೇಶದ ಎಲ್ಲ ವರ್ಗದ ಮಹಿಳೆಯರು ಸೇರಿ ದಮನಿತರಿಗೆ ಬದುಕುವ ಹಕ್ಕು ನೀಡಿದ್ದಾರೆ. ವಿಶ್ವದ ಎಲ್ಲ ಸಂವಿಧಾನ ಓದಿಕೊಂಡ ಬಾಬಾ ಸಾಹೇಬರು ಸಮರ್ಥವಾದ ಗ್ರಂಥ ನೀಡಿದ್ದಾರೆ ಎಂದರು.
ನಂತರ ಮಾತನಾಡಿದ ಸಾಹಿತಿ ಕೆ. ನೀಲಾ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವುದರ ಮೂಲಕ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಸಂವಿಧಾನ ಜಾರಿಗೆ ಬಂದ ಮೇಲೆ ಮಹಿಳೆಯರಿಗೆ ಎಲ್ಲ ಅವಕಾಶಗಳು ಸಿಗುತ್ತಿವೆ. ಅವಕಾಶವಾದಿ ಜನರು ಸಂವಿಧಾನ ಪೂರ್ಣವಾಗಿ ಜಾರಿಗೆ ಬರಲು ಬಿಡುತ್ತಿಲ್ಲ. ದೇಶದ ಜನರು ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಮಾಡಬೇಕು ಎಂದರು.
ಬಾಕ್ಸ್ :
ದಸಂಸ ರಾಜ್ಯ ಅಧ್ಯಕ್ಷ ಅರ್ಜುನ ಭದ್ರೆ ಮಾತನಾಡಿ ಡಾ.ಅಂಬೇಡ್ಕರ್ ಅವರು ದೇಶದ ಜ್ಞಾನದ ಜ್ಯೋತಿಯಾಗಿದ್ದಾರೆ. ಎಲ್ಲರಿಗೂ ಧ್ವನಿಯಾದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ವಹಿಸಿದ್ಡರು. ಮಹೇಶ ಕೋಕಿಲೆ ಕಾರ್ಯಕ್ರಮ ಆಯೋಜಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಕ್ರಾಂತಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಕಾಶೀಮ ಪಟೇಲ ಮುದೋಳ, ಶಿವಶರಣಪ್ಪ ಕೋಬಾಳ, ಶರಣಬಸವ ಕಲ್ಲಾ, ಮಲ್ಲಿಕಾರ್ಜುನ ಪೂಜಾರಿ, ಶ್ರೀಮತಿ ಶಿವಕಾಂತಮ್ಮ ದಿ. ಶಾಂತಪ್ಪ ಕಟ್ಟಿಮನಿ, ಗುರಣ್ಣ ಕಾಚಾಪುರ, ಶಾಂತಪ್ಪ ಯಲಗೋಡ, ಪುಂಡಲೀಕ ಗಾಯಕವಾಡ, ಭೀಮರಾಯ ನಗನೂರ, ದವಲಪ್ಪ ಮದನ್, ಮಲ್ಲಿಕಾರ್ಜುನ ಕೆಲ್ಲೂರ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ರವಿ ಕುಳಗೇರಿ, ಶ್ರೀಮಂತ ಧನ್ನಕರ್, ಶಿಕ್ಷಕ ಗಂಗಪ್ಪ ಬಳಗಾನೂರ, ಮಲ್ಲಮ್ಮ ಕೊಂಬಿನ್, ಶ್ರೀಮಂತ ಹರನೂರ, ರಾಹುಲ್ ಪಂಚಶಿಲ್, ಸಿದ್ದು ಕೇರುರ ಯಶವಂತ ಬಡಿಗೇರ, ಮಿಲಿಂದ ಸಾಗರ ದೇವಿಂದ್ರ ಬಡಗೇರ, ವಿಶ್ವ ಆಲೂರ ಸೇರಿದಂತೆ ಹಲವರು ಉಪಸ್ಥಿತರಿರುವರು.

ಇದೇ ವೇಳೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ದಂಪತಿಗಳಾದ ಡಾ. ಮಹಾಲಿಂಗಪ್ಪ ಬಿ. ಮಂಗಳೂರು ಡಾ. ಸೌಭಾಗ್ಯ ಎಂ. ಮಂಗಳೂರು ದಂಪತಿಗಳನ್ನು ಸನ್ಮಾನಿಸಲಾಯಿತು.