ಸಂವಿಧಾನದ ಉಳಿವಿಗಾಗಿ ಬಿಜೆಪಿ ಸೋಲಿಸಿ-ಡಿ.ಎಚ್.ಪೂಜಾರ

ಸಂಜೆವಾಣಿ ವಾರ್ತೆ
ಮಾನ್ವಿ.ಮೇ.೦೨- ಲೋಕಸಭಾ ಚುನಾವಣೆ ನಡೆಯುತ್ತಿರುವ ಮುಂಚೆಯೇ ನಾವು ನಾಲ್ಕು ನೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ತಂತ್ರವನ್ನು ರೂಪಿಸಿದ್ದೇವೆ ಎಂದು ಹೇಳುವ ಬಿಜೆಪಿಯ ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ. ಆದ್ದರಿಂದ ಸಂವಿಧಾನ ಮೂಲ ಆಶಯ ಹಾಗೂ ಸಂವಿಧಾನದ ಉಳುವುಗಾಗಿ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಇಂಡಿ ಒಕ್ಕೂಟದ ಅಭ್ಯರ್ಥಿಯಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ಸಿಪಿಐ (ಎಂಎಲ್) ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರಿ ಹೇಳಿದರು.
ಪಟ್ಟಣದ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸಿಪಿಐ (ಎಂಎಲ್) ಮಾಸ್ ಲೈನ್ ಹಾಗೂ ಎಂಎಲ್‌ಪಿಐ ರೆಡ್ ಪ್ಲ್ಯಾಗ್ ಸಹಯೋಗದೊಂದಿಗೆ ಚುನಾವಣೆ ಜಾಗೃತಿ ಆದೋಲನ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು ಬಿಜೆಪಿ ದೇಶಕ್ಕೆ ಮಾರಕವಾಗಿದ್ದು ಕೇವಲ ಸುಳ್ಳುಗಳನ್ನು ಹೇಳಿಕೊಂಡು ದೇಶದ ಜನರಿಗೆ ವಂಚನೆ ಮಾಡುತ್ತಿದೆ ಹಾಗೂ ರೈತ ವಿರೋಧಿ ಕಾನೂನನ್ನು ಜಾರಿ ಮಾಡಿ ರೈತರ ಸಾವಿಗೆ ಕಾರಣವಾಗಿವೆ ಎಂದರು.
ನಂತರ ರೆಡ್ ಪ್ಲ್ಯಾಗ್ ರಾಜ್ಯ ಕಾರ್ಯದರ್ಶಿ ಬಿ.ಬಸಲಿಂಗಪ್ಪ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ ಮಾತಾನಾಡಿ, ಚುನಾವಣೆ ಪಾರದರ್ಶಕ ನೆಪದಲ್ಲಿ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಸಾವಿರಾರು ಕೋಟಿ ವಸೂಲಿ ಮಾಡಿದೆ ಹಾಗೂ ಬಡ ರೈತರನ್ನು ಬಿಟ್ಟು ಕಾರ್ಪೋರೆಟ್ ಕಂಪನಿಗಳ ಲಾಭಕ್ಕಾಗಿ ಹಾಗೂ ಕೋಮುವಾದಿ ಬಿಜೆಪಿಯು ಒಂದು ಜಾತಿ ಸಂಘದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಅದಕ್ಕಾಗಿ ಬಿಜೆಪಿಯನ್ನು ಸೋಲಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವರಾಜ ದೊಡ್ಡಿ, ಚಿಟ್ಟಿಬಾಬು, ಮಲ್ಲೇಶ ಮದ್ಲಾಪೂರ, ವಿರೇಶ ಸೇರಿದಂತೆ ಅನೇಕರು ಇದ್ದರು.