ಸಂವಿಧಾನದ ಆಶಯಗಳು ಇಂದಿಗೂ ಈಡೇರುತ್ತಿಲ್ಲ: ಚಿಂತಕ ಮೋದೂರು ಮಹೇಶರಾದ್ಯ ವಿಷಾದ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.13:- ಹುಣಸೂರು ನಗರದ ಮುನೇಶ್ವರ ಕಾವಲು ಮೈದಾನದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನದ ಜಾಗೃತಿ ಜಾತಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯರವರು ಮಾತನಾಡುತ್ತಾ, ಹಲವಾರು ದೇಶಗಳ ಸಂವಿಧಾನವನ್ನು ಸುಧೀರ್ಘವಾಗಿ ಸಮಗ್ರವಾಗಿ ಅಧ್ಯಯನ ಮಾಡಿ ಭಾರತ ದೇಶದ ಬಹುತ್ವವನ್ನು ಎತ್ತಿ ಹಿಡಿಯುವ ಒಂದು ಶ್ರೇಷ್ಠ ಸಂವಿಧಾನವನ್ನು ಡಾ. ಬಿಆರ್ ಅಂಬೇಡ್ಕರ್ ರವರು ರಚಿಸಿದ್ದು ಇಲ್ಲಿಗೆ 75 ವರ್ಷಗಳು ಸಂಧಿಸಿದರೂ ಅವುಗಳ ಆಶಯ ಇಂದಿಗೂ ಈಡೇರದೇ ಇರುವುದು ಈ ದೇಶದ ವಿಪರ್ಯಾಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತದ ಸಂವಿಧಾನದ ಆಶಯಗಳಾದ ಶಾಂತಿ ಸಮಾನತೆ ಸಹೋದರತ್ವ ಸಹಬಾಳ್ವೆ ನ್ಯಾಯ ಮುಂತಾದವುಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಿರುವುದು ಭಾರತದ ಪ್ರಜೆಗಳಲ್ಲಿ ಆತ್ಮವಿಶ್ವಾಸವನ್ನ ಹಾಗೂ ಹಕ್ಕು ಕರ್ತವ್ಯಗಳ ಪರಸ್ಪರ ಗೌರವವನ್ನು ಬೆಳೆಸಲು ಸಹಕಾರಿಯಾಗಿದೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ಸಭೆಯಲ್ಲಿ ಭಾರತ ದೇಶದ ಸಮಗ್ರ ಜನತೆಗೆ ಅನುಕೂಲವಾಗುವ ಕರಡು ಪ್ರತಿಯನ್ನು ಕುರಿತ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟವಾದ ಉತ್ತರಗಳನ್ನು ಮತ್ತು ಸಮರ್ಥನೆಯನ್ನು ಮತ್ತು ದಾಖಲೆಗಳನ್ನು ಒದಗಿಸುತ್ತ ಜಗತ್ತಿನ ಶ್ರೇಷ್ಠ ಸಂವಿಧಾನ ರಚಿಸುವಲ್ಲಿ ಸಫಲರಾಗಿದ್ದರು. ಅಂತಹ ಮಹನೀಯರ ಆಶಯ ಮತ್ತು ಆದರ್ಶಗಳನ್ನು ಭಾರತದ ಪ್ರಜೆಗಳಾದ ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಆ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸಂವಿಧಾನ ಜಾಗೃತಿ ಜಾತವನ್ನು ಏರ್ಪಡಿಸಿ ಇಡೀ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೂ ಸಂವಿಧಾನದ ಆಶಯಗಳನ್ನು ತಲುಪಿಸುವಲ್ಲಿ ಒಂದು ಸಾರ್ಥಕ ಪ್ರಯತ್ನ ಮಾಡುತ್ತಿದೆ ಇದೊಂದು ಆಶಾಭಾವದ ಸಂಗತಿಯಾಗಿದೆ ಹಾಗೂ ಸಂವಿಧಾನವೇ ಭಾರತ ದೇಶದ ಧರ್ಮ ಗ್ರಂಥವಾಗಿದೆ ಎಂದರು.
ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ಶರ್ಮಿಳ ಸಂವಿಧಾನ ಜಾಗೃತಿ ಜಾತಾ ರಥವನ್ನು ಬರಮಾಡಿಕೊಂಡರು.
ಸಮುದಾಯದ ಮುಖಂಡ ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿ ಸಂವಿಧಾನವು ಸರ್ವ ಜನಾಂಗಕ್ಕೂ ಆದರ್ಶವಾಗಿದೆ ಪ್ರಸ್ತುತ ಬದುಕಿಗೆ ನಾವೆಲ್ಲರೂ ಸಂವಿಧಾನಕ್ಕೆ ಕೃತಜ್ಞರಾಗಿರಬೇಕು ಎಂದು ಆಶಿಸಿದರು.
ಸಂವಿಧಾನ ಜಾಗೃತಿ ಜಾತದಲ್ಲಿ ವಿವಿಧ ಶಾಲೆಯ ಮಕ್ಕಳು ವಾದ್ಯ ವೃಂದದ ಮೂಲಕ ಮುನೇಶ್ವರ ಕಾವಲು ಮೈದಾನಕ್ಕೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಆಗಮಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾಗಿ ಸತೀಶ್ ಕುಮಾರ್ ಕೃಷ್ಣರಾಜಗುಪ್ತ ವಿವೇಕ್ ರಮೇಶ್ ಮುಖಂಡರುಗಳಾದ ನಿಂಗರಾಜ ಮಲ್ಲಾಡಿ ಬಸವಲಿಂಗಯ್ಯ ಬಸವರಾಜು ಕುಮಾರ್ ಕೊಳಘಟ್ಟ ಕೃಷ್ಣಯ್ಯ ಕಾಂತರಾಜು ರತ್ನಾಪುರಿ ಅಪ್ಪಣ್ಣ ಜೆ.ಮಹದೇವ್, ಗಜೇಂದ್ರ ಕಿರಿಜಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುಜೇಂದ್ರ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಸಿದ್ದರಾಜು, ನೋಡಲ್ ಅಧಿಕಾರಿ ಗಣಪತಿ ಜಕಾತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ದೈಹಿಕ ಶಿಕ್ಷಣ ಸಮನ್ವಯ ಅಧಿಕಾರಿ ಲೋಕೇಶ್ ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕಿರಿಜಾಜಿ ಗಜೇಂದ್ರ ವಸಂತ ಹೊನ್ನೇನಹಳ್ಳಿ ಸಿಂಗೇಶ್ ಮುಂತಾದ ಕಲಾವಿದರು ಅಂಬೇಡ್ಕರ್ ಕ್ರಾಂತಿ ಗೀತೆಗಳು ಹಾಡಿ ರೋಮಾಂಚನಗೊಳಿಸಿದರು.