ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯೋಣ: ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ.


ಸಂಜೆವಾಣಿವಾರ್ತೆ
ಹರಪನಹಳ್ಳಿ.ಜ.27; ಭಾರತದ ಪ್ರಜೆಗಳಾದ ನಾವು ಮತದಾನ ಮಾಡುವಾಗ ನಿಷ್ಠವಂತ ವ್ಯಕ್ತಿಗೆ ಮತ ನೀಡಿದಾಗ ಮಾತ್ರ ನಮ್ಮ ದೇಶ ಅಭಿವೃದ್ದಿ ಆಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ. ಭಾರತಿ ಹೇಳಿದರು.
ಪಟ್ಟಣದ ಜೆ.ಎಂ.ಎಫ್.ಸಿ.ನ್ಯಾಯಾಲಯದ ಆವಣದಲ್ಲಿ ಧ್ವಜಾರೋಹÀಣ ಕಾರ್ಯಕ್ರಮವನ್ನು ನೆರವೆರಿಸಿ ನಂತರ ನ್ಯಾಯಾಲಯದ ನೂತನ ಕಾಂಪೌಂಡ್  ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೆರಿಸಿ  ಬಳಿಕ ಮಾತನಾಡಿದರು. ಡಾ.ಬಿ.ಅರ್.ಅಂಬೇಡ್ಕರ್‍ರವರ ಶ್ರಮದ ಫಲವಾಗಿ ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಭಾತೃತ್ವ, ಏಕತೆಯ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಇದಾಗಿದ್ದು, ದೇಶದಲ್ಲಿ ಮೊಟ್ಟಮೊದಲ ಬಾರಿಗೆ  18 ವರ್ಷ ಮೇಲ್ಪಟ್ಟ  ಪುರುಷ ಮತ್ತು ಮಹಿಳೆಯರಿಗೆ  ಮತದಾನದ ಹಕ್ಕನ್ನು  ನೀಡಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯೋಣ ಎಂದರು.
1947ರ ಅಗಸ್ಟ್ 15 ರಂದು ಬ್ರಿಟೀಷರ  ಅಳ್ವಿಕೆಯಿಂದ  ಮುಕ್ತಿಯನ್ನು ಪಡೆದ ಭಾರತಕ್ಕಾಗಿ ಸಂವಿಧಾನ ರಚನೆಯ ಕಾರ್ಯ ಆರಂಭಗೊಂಡಿತು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್  ರಚಿಸಿದ  ಭಾರತೀಯ ಸಂವಿಧಾನವು  1950 ಜನವರಿ 26 ರಂದು  ಜಾರಿಗೆ ತರಲಾಯಿತು. ಈ ದಿನವನ್ನು ಸಂವಿಧಾನ ದಿನವಾಗಿಯೂ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೇಲ್ ಮಾತನಾಡಿ, ಜಾತಿ, ಮತ, ಧರ್ಮವನ್ನು ಬಿಟ್ಟು  ಎಲ್ಲಾರೂ ಒಂದೇ ಎಂಬ ಮನೋಭಾವನೆಯಿಂದ ನಡೆದಾಗ ಮಾತ್ರ ಗಣರಾಜ್ಯವಾಗಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ, ವಕೀಲರ ಸಂಘದ ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್, ಕಾರ್ಯದರ್ಶಿ ಜಿ.ಎಸ್.ಎಂ. ಕೊಟ್ರಯ್ಯ, ಸರ್ಕಾರಿ ಅಭಿಯೋಜಕರಾದ ಮೀನಾಕ್ಷೀ ಎನ್. ನಿರ್ಮಲ. ಅಪರ ಸರ್ಕಾರಿ ವಕೀಲರಾದ ಕೆ. ಜಗದಪ್ಪ, ನಂದೀಶ್. ಹಿರಿಯ ವಕೀಲರುಗಳಾದ ಎಂ. ಅಜ್ಜಣ್ಣ, ಆರುಂಡಿ ನಾಗರಾಜ್, ಕೆ. ಬಸವರಾಜ್,  ರಾಮ್ ಭಟ್, ಕೆ. ಪ್ರಕಾಶ್, ವಿ.ಜಿ. ಪ್ರಕಾಶ್ ಗೌಡ, ಶಾಂತವೀರ್ ನಾಯ್ಕ, ಬಿ. ಹಾಲೇಶ್, ಮನೋಹರ್, ಶೀರಾಜ್, ಡಿ. ಹನುಮಂತಪ್ಪ, ಕೆ. ಕೊಟ್ರೇಶ್, ಹೂಲೇಪ್ಪ,  ಜೆ. ಸೀಮಾ, ದ್ರಕ್ಷಯಣಮ್ಮ, ರೇಣುಖಾ ಮೇಟಿ, ಸೇರಿದಂತೆ ಇತರರು ಇದ್ದರು.