ಸಂವಿಧಾನದಿಂದ ಸಮಾನತೆಯ ಸಮಾಜ ನಿರ್ಮಾಣ

ಸಂಡೂರು :ಮಾ: 30: ಬಾಬಾಸಾಹೇಬರು ಸಂವಿಧಾನ ಬರೆಯದಿದ್ದರೆ ಈಗಿನ ಓಬಿಸಿಗೆ ಸೇರಿದ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಚಹ ಮಾರುವ ಹುಡುಗ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿರಲಿಲ್ಲ, ಪೇಪರ್ ಮಾರುವ ಬಾಲಕ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುತ್ತಿರಲಿಲ್ಲ, ದೇಶಕ್ಕೆ ಮತದಾನದ ಹಕ್ಕನ್ನು ತಂದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ರಮೇಶ್ ಸುಗ್ಗೇನಹಳ್ಳಿಯವರು ತಿಳಿಸಿದರು.
ಅವರು ತಾಲೂಕಿನ ಸ್ವಾಮಿಹಳ್ಳಿ ಗ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದ ವತಿಯಿಂದ ಸ್ವಾಮಿಯಳ್ಳಿ ಗ್ರಾಮದಲ್ಲಿ ಡಿ.ಎಸ್.ಎಸ್. ನಾಮಫಲಕ ಉದ್ಘಾಟನೆ, ಗ್ರಾಮ ಘಟಕದ ನೂತನ ಪದಾಧಿಕಾರಿಗಳ ನೇಮಕ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‍ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಸಂವಿಧಾನದಲ್ಲಿ ಎಲ್ಲಾ ಜಾತಿಯವರು ಮೀಸಲಾತಿಯನ್ನು ಪಡೆಯುತ್ತಿದ್ದಾರೆ ಅದರೆ ದುರಂತ ಬಾಬಾಸಾಹೇಬರನ್ನು ಕೇವಲ ಎಸ್ಸಿ, ಎಸ್ಟಿ, ನಾಯಕರು ಎಂದು ಬಣ್ಣಿಸುತ್ತಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸ್ವಾಮಿಹಳ್ಳಿಯ ಮುಖಂಡ ಅರ್.ಕೆ. ಹೆಗಡೆ ಮಾತನಾಡಿ ಬಾಬಾಸಾಹೇಬರ ಸಂವಿಧಾನದಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಸಮಾನತೆ ಇದ್ದರೂ ಕೂಡಾ ಕೆಲವು ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ, ಈ ವಿಚಾರ ನಮ್ಮ ಸಮುದಾಯಕ್ಕೆ ತುಂಬಾ ನೋವಿನ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ಯುವಕರು ಶಿಕ್ಷಣವನ್ನು ಪಡೆದುಕೊಂಡು ಅಭಿವೃದ್ದಿಯಾಗುವ ಅನಿವಾರ್ಯತೆ ಇದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ಬಾಬಾಸಾಹೇಬರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೇಂದು ಕರೆನೀಡಿದರು. ಬಾಬಾಸಾಹೇಬರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಅದ್ದೂರಿಯಾಗಿ ನೂರಾರು ಡಿ.ಎಸ್.ಎಸ್. ಕಾರ್ಯಕರ್ತ ಹೆಣ್ಣು ಮಕ್ಕಳು ಅರತಿ ಬೆಳಗುವ ಮುಖಾಂತರ ವಿಜೃಂಭಣೆಯಿಂದ ಮೆರವಣಿಗೆಯನ್ನು ನಡೆಸಿದರು. ವಿಶೇಷವಾಗಿ ಸ್ವಾಮಿ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿಯ ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಸಂಸ್ಥೆಗೆ ಡಿ.ಎಸ್.ಎಸ್. ನ 40 ಸದಸ್ಯರು ರಕ್ತದಾನ ಮಾಡುವ ಮೂಲಕ ಮುಂದಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿಕೊಂಡರು.
ಎನ್.ಎಂ.ಡಿ.ಸಿ. ಪಂಪಾಪತಿ, ತಾಲೂಕು ಖಜಾಂಚಿ ನಾಮಫಲಕವನ್ನು ಉದ್ಘಾಟಿಸಿದರು, ಮಲ್ಲೇಶ್ ಕಮತೂರು ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು, ಈ ಸಂದರ್ಭದಲ್ಲಿ ಡಿ.ಎಸ್. ಎಸ್. ಸ್ವಾಮಿಹಳ್ಳಿ ಅಧ್ಯಕ್ಷರು, ದುರುಗಜ್ಜರ ಹುಲಿಗೇಶ್, ಕಾರ್ಯಾದರ್ಶಿಗಳು ಚೌಡಿ ಬಸವರಾಜ, ಸಿ.ಹೆಚ್.ಎಸ್. ಪರಶುರಾಮ, ವಸೂರೇಶ, ಗಾದಿಲಿಂಗಪ್ಪ, ಜೆ.ರಾಮಾಂಜಿನಿ, ಸಣ್ಣ ಹುಲುಗಪ್ಪ, ಮಾಜಿ ಸದಸ್ಯರುಗಳಾದ ದೊಡ್ಡ ಹುಲುಗಪ್ಪ, ದುರುಗಮ್ಮರ ಗಂಗಾಧರ, ದಲಿತ ಸಂಘದ ಸ್ವಾಮಿ ಹಳ್ಳಿ ಕಾರ್ಯಾಕಾರಿಣಿ ಸದಸ್ಯರುಗಳಾದ ಮೆಚ್ಚಿರಿ ಗಂಗಾಧರ, ಕಾಡಪ್ಪನವರ ಕಾಡಪ್ಪ, ಪೂಜಾರಿ ಬಸವರಾಜ, ಉಗ್ಗಿ ಕುಮಾರಿ ಇತರರು ಉಪಸ್ಥಿತರಿದ್ದರು, ಈ ಸಮಾರಂಭದಲ್ಲಿ ಸ್ವಾಮಿ ಹಳ್ಳಿ ಗ್ರಾಮಪಂಚಾಯಿತಿ ಸದಸ್ಯರುಗಳಾದ ಶಿಲ್ಪ, ಹನುಮನಗೌಡ, ಮೇಘನಾನಾಗೇಶ್‍ರಡ್ಡಿ, ಹೆಚ್.ಪರಶುರಾಮ, ಎನ್.ಮಂಜುನಾಥ, ಸೋವೆನಳ್ಳಿ ಗ್ರಾ.ಪಂ. ಅಧ್ಯಕ್ಷ ಅಂಜಿನಪ್ಪ, ಶಾಲೆಯ ಮುಖ್ಯಗುರುಗಳಾದ ಬಿ.ಎಂ. ಗಿರೀಶ್, ಅಧ್ಯಕ್ಷರು ರಕ್ಷಣಾವೇದಿಕೆ, ಸ್ವಾಮಿಹಳ್ಳಿ ಟಪಾಲರ ಮಂಜುನಾಥ ಅತಿಥಿಗಳಾಗಿ ಅಗಮಿಸಿದ್ದರು, ವಿಶೇಷ ಆಹ್ವಾನಿತರಾಗಿ ಹೂಲೆಮ್ಮ ನಾಗಪ್ಪ ಅಧ್ಯಕ್ಷರು ಗ್ರಾಮ ಪಂಚಾಯಿತಿ ಯರ್ರಯ್ಯನಹಳ್ಳಿ, ಕೆ.ಬಿ.ರಮೇಶ್ ಉಪಾಧ್ಯಕ್ಷರು, ಗ್ರಾ.ಪಂ. ಯರ್ರಯ್ಯನಹಳ್ಳಿ, ಸ್ವಾಮಿಹಳ್ಳಿ ಜಾತ್ಯಾತೀತ ಮುಖಂಡರು, ದಳಪತಿ ಯರ್ರಿಯಸ್ವಾಮಿ, ಶ್ರೀಶೈಲ ಹೋಡಸರ, ಷಣ್ಮುಖಸ್ವಾಮಿ, ಓ.ಈ. ಚಂದ್ರಪ್ಪ, ಧನುಂಜಯ ರಡ್ಡಿ, ಕಸ್ತೂರಿ ರಡ್ಡಿ, ಎನ್. ಓಕಾಂರಪ್ಪ, ವೆಂಕಟರಡ್ಡಿ, ಜಂದೂ ಪೀರಾ, ಚೌಡಿ ಬಸವರಾಜ ಅಗಮಿಸಿದ್ದರು,