ಸಂವಿಧಾನದಿಂದ ಯಶಸ್ವಿ ಆಡಳಿತ: ಆನಂದ್

ಬಂಗಾರಪೇಟೆ.ಏ.೧೭- ದಮನಿತರ ದನಿಯಾಗಿದ್ದ ವಿಚಾರವಾದಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಃಪಂಃ ಸದಸ್ಯರವರೆಗೂ ಹಲವು ಹಂತಗಳಲ್ಲಿ ಯಶಸ್ವಿಯಾಗಿ ಆಡಳಿತ ನಡೆಯಲು ಕಾರಣವಾಗಿದೆ ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕೆಂದು ದಲಿತ ಸಮಾಜ ಸೇನೆಯ ರಾಜ್ಯಧ್ಯಕ್ಷ ಸೂಲಿಕುಂಟೆ ಆನಂದ್ ಹೇಳಿದರು.
ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಸಂಘಟನೆಯಿಂದ ಮಾಲಾರ್ಪಣೆ ಮಾಡಿ ಮಾತನಾಡಿ, ಬಡತನವನ್ನು ಸಹಿಸಬಹುದು ಆದರೆ ಸ್ವಾಭಿಮಾನವನ್ನೇಕೆಣಕುವ ಅಸ್ಪೃಶ್ಯತಾ ಪದ್ಧತಿಯನ್ನು ಸಹಿಲಾಗದು. ಜಾತಿವ್ಯವಸ್ಥೆಯ ಈ ಅನಿಷ್ಟವನ್ನು ದೂರ ಮಾಡಲು ಅಂಬೇಡ್ಕರ್ ನಡೆಸಿದ ಹೋರಾಟ ವರ್ಣಿಸಲು ಅಸಾಧ್ಯವಾದುದು, ಅಸ್ಪೃಶ್ಯತೆ, ಅಸಮಾನತೆ ವಿರುದ್ದ ಹೋರಾಟ ಮಾಡಲು ಎದೆಗಾರಿಕೆ ಅಂಬೇಡ್ಕರ್ ತೋರಿದ ದಿಟ್ಟನತ ಮೆಚ್ಚುವಂತದ್ದು, ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗಿದೆ. ಇಂತಹ ಮಹಾನ್ ವ್ಯಕ್ತಿಯಜಯಂತಿಯನ್ನು ಸರಳವಾಗಿ ಆಚರಿಸುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದರು.
ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ ೧೨ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ, ಅವರ ಸಮ ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತದ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳು ಮಾದರಿಯಾಗಿ ಸ್ವೀಕರಿಸಿ ಅನುಕರಿಸುತ್ತಿದೆ. ಆದಕಾರಣ ಇಂದಿನ ಸಮಾಜದಲ್ಲಿ ಸ್ವಾತಂvತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ನಾವೆಲ್ಲರೂ ಅಳವಡಿಸಿಕೊಂಡಲ್ಲಿ ಅವರುಕಂಡ ನಿಜವಾದದೇಶ ಪ್ರೇಮ ಮತ್ತು ಸಂವಿಧಾನದ ಆಶಯವನ್ನು ಸಾಮಾಜಿಕ ಪ್ರಜಾಪ್ರಭುತ್ವರಾಷ್ಟ್ರದ ಕನಸನ್ನು ನಾವುಗಳು ನನಸಾಗಿಸಬಹುದು ಎಂದರು.
ಈ ವೇಳೆ ದೇವಗಾನಹಳ್ಳಿ ನಾಗೇಶ್, ಅಯ್ಯಪ್ಪ, ಮಂಜು, ಆಟೋಕರ್ಣ, ಗೌತಮ್, ತುಜಾಮಿಲ್ ಪಾಷ, ರಾಜೇಶ್, ಕೃಷ್ಣ ಇದ್ದರು.