ಸಂವಿಧಾನದಿಂದ ಎಲ್ಲ ಜನಾಂಗಕ್ಕೂ ನ್ಯಾಯ

ಮಹದೇವಪುರದ ಕುರುಡುಸೊಣ್ಣೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದ ಗಣ್ಯರನ್ನು ಯುವ ಶಕ್ತಿ ಸೂರಿರವರು ಸನ್ಮಾನಿಸಿದರು.

ಕೆ.ಆರ್. ಪುರ,ಏ.೧೫-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಿಂದ ಪ್ರತಿಯೊಂದು ಜನಾಂಗಕ್ಕೆ ನ್ಯಾಯ ದೊರೆತಿದೆ ಎಂದು ಸಮತ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ತಿಳಿಸಿದರು.
ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಮಹದೇವಪುರ ಕ್ಷೇತ್ರದ ಕುರುಡುಸೊಣ್ಣೇನಹಳ್ಳಿಯಲ್ಲಿ ಯುವಶಕ್ತಿ ಸೂರಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿದರು.
ಚುನಾವಣೆ ಘೋಷಣೆ ಮಾಡಿರುವ ಹಿನ್ನೆಲೆ ನೀತಿ ಸಂಹಿತೆ ಇರುವುದರಿಂದ ಕಾನೂನಿನ ಚೌಕಟ್ಟಿನಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದು ಮುಂದಿನ ಬಾರಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು. ಅಂಬೇಡ್ಕರ್‌ರವರು ರಚಿಸಿರುವ ಸಂವಿಧಾನದಿಂದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಅಡಿಯಲ್ಲಿ ದೊರಕಬಹುದಾದ ಎಲ್ಲಾ ಹಕ್ಕುಗಳು ದೊರೆಯುತ್ತಿದೆ ಎಂದು ಹೇಳಿದರು.ಸುಂದರ್‌ಗಾಗಿ ದಲಿತರಿಂದ ಸಪೋಟ್ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ದಲಿತ ಯುವ ನಾಯಕ ಶೀಗೇಹಳ್ಳಿ ಸುಂದರ್ ಅವರ ಬೆಂಬಲಕ್ಕಾಗಿ ಕಾರ್ಯಕ್ರಮದಲ್ಲಿ ಬಿಕ್ಷೆ ರೀತಿಯಲ್ಲಿ ಹಣ ಸಹಾಯ ಪಡೆಯಲಾಯಿತು.
ಈ ಸಂದರ್ಭದಲ್ಲಿ ಬಂತಾಜಿ ಕಲ್ಯಾಣ ಗಿರಿ ಸ್ವಾಮೀಜಿ, ಆರ್‌ಎಂಎನ್ ರಮೇಶ್, ಗಜಸೇನೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಗಜೇಂದ್ರ, ಯಶಸ್ವಿನಿಗೌಡ, ಯುವಶಕ್ತಿ ಸೂರಿ ಮಾರತ್ತಹಳ್ಳಿ ರಮೇಶ್, ಸಾಮ್ರಾಟ್ ಮಂಜು, ಗೌರವಾಧ್ಯಕ್ಷೆ ನಾಗಮ್ಮ, ಕ್ಷೇತ್ರಾಧ್ಯಕ್ಷೆ ಮಂಜುಳಾ, ಶಾಖೆ ಅಧ್ಯಕ್ಷೆ ವರಲಕ್ಷ್ಮಿ, ಕ್ಷೇತ್ರಾಧ್ಯಕ್ಷ ಅಶೋಕ್ ಮತ್ತಿತರರಿದ್ದರು.