ಸಂವಿಧಾನದಲ್ಲಿ ನೀಡಿದ ಅವಕಾಶ ಸಮಾಜ ಬಳಸಿಕೊಳ್ಳುತ್ತಿಲ್ಲ: ಮತ್ತಿಮಡು.

(ಸಂಜೆವಾಣಿ ವಾರ್ತೆ)
ಶಹಾಬಾದ :ಜು.18:ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ಸಂವಿಧಾನದಲ್ಲಿ ಮಾದಿಗ ಸಮಾಜಕ್ಕೆ ನೀಡಿದ ಸೌಲತ್ತು, ಅವಕಾಶಗಳನ್ನು ಸಮಾಜ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಸಂವಿಧಾನಬದ್ದ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ನಗರದ ಇಂಡಿಯಾ ಸಭಾಗೃಹದಲ್ಲಿದಲ್ಲಿ ತಾಲೂಕ ಮಾದಿಗ ಸಮಾಜದ ವತಿಯಿಂದ ನೂತನ ಶಾಸಕ ಬಸವರಾಜ ಮತ್ತಿಮಡು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ನಗರದಲ್ಲಿ ಮಾದಿಗ ಸಮಾಜದವರು ಇರುವ ಬಡಾವಣೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಅಧಿವೇಶನದ ನಂತರ ಬಡಾವಣೆಗೆ ಭೇಟ್ಟಿ ನೀಡಿ, ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಸಮಾಜದ ಹಾಗೂ ಮತಕ್ಷೇತ್ರದ ಯಾವುದೇ ಸಮಸ್ಯೆಗಳಿರಲಿ ಅವುಗಳಿಗೆ ಸ್ಪಂದಿಸಿ, ನಿಮ್ಮೇಲ್ಲರ ಆಶೀರ್ವಾದಿಂದ ಸೂಕ್ತ ಪರಿಹಾರ ಕಂಡುಕೊಳ್ಳುವದಾಗಿ ಹೇಳಿದರು. ಓಕಳಿ ಗ್ರಾಮದಲ್ಲಿ ಚನ್ನಯ್ಯನವ ಮೂರ್ತಿಗೆ 50 ಸಾವಿರ ನೀಡಿದ್ದು, 10 ಲಕ್ಷ ರೂ. ಶಾಸಕ ಅನುದಾನ ನೀಡಿರುವದಾಗಿ ಹೇಳಿ, ನಗರದಲ್ಲಿಯೂ ಚನ್ನಯ್ಯನವರ ಮೂರ್ತಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.
sಸಮಾಜದ ಜಿಲ್ಲಾ ಮುಖಂಡ ಭೀಮಣ್ಣ ಬಿಲ್ಲವ ಮಾತನಾಡಿ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿಂದ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ, ಸಮಾಜದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಶಾಸಕ ಬಸವರಾಜ ಮತ್ತಿಮಡು ಅವರು ಈ ಕೊರತೆಯನ್ನು ನೀಗಿಸಬೇಕು, ಸಮಾಜದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಾಡಿ ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕನಕಪ್ಪ ದಂಡಗುಲಕರ, ಕಮಲಾಪುರದ ಗುಂಡಪ್ಪಾ ಸಿರಡೋಣ, ಅಧ್ಯಕ್ಷತೆ ವಹಿಸಿದ್ದ ಭೀಮರಾಯ ಮುದ್ನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಅಣವೀರ ಇಂಗಿನಶೆಟ್ಟಿ, ನಗರ ಸಭೆ ಸದಸ್ಯೆ ಪೀರಮ್ಮಾ ಪಗಲಾಪುರ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಿತ್ರಕಲಾ ಶಿಕ್ಷಕ ಮಹ್ಮದ ಖದೀರ, ನಿಂಗಪ್ಪ ಹುಳಗೋಳ, ನಾಗೇಂದ್ರ ದಂಡೋತಿ, ಚಂದ್ರಕಾಂತ ಗೊಬ್ಬುರಕರ, ಮರೆಪ್ಪ ದೊಡ್ಡಮನಿ ವೇದಿಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಸಮಾಜ ಪ್ರತಿಭೆಗಳಾದ ಡಾ.ಚಿದಾನಂದ ಮುದ್ನಾಳ, ಡಾ.ಸುರೇಶ ಬೆಳಗುಂದಿ, ಡಾ.ರಾಜಶೇಖರ ಭಾವಿಮನಿ, ಕು. ಪೃಥ್ವಿ ಅವರನ್ನು ಸನ್ಮಾನಿಸಲಾಯಿತು. ನಾಗರಾಜ ಮದ್ನಾಳ ನಿರೂಪಿಸಿದರು, ಮನೋಹರ ಮೇತ್ರಿ ಸ್ವಾಗತಿಸಿದರು. ಮರಲಿಂದ ಯಾದಗಿರಿ ನಿರೂಪಿಸಿದರು. ಯಲ್ಲಾಲಿಂಗ ಹಯ್ಯಾಳಕರ ವಂದಿಸಿದರು. ಕಾರ್ಯಕ್ರಮದಲ್ಲಿ ಅನೀಲ ಮೈನಾಳಕರ್, ಪುನೀತ ಹಳ್ಳಿ, ರವಿ, ಅಮರ ಕೋರೆ, ಶರಣು ಪಗಲಾಪುರ, ಸಂತೋಷ ಹುಲಿ,ಮೋಹನ ಹಳ್ಳಿ, ನವೀನ ಸಿಪ್ಪಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.